ಕ್ಯಾನ್ಸರ್ ಗೆದ್ದಿದ್ದ ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ಬ್ರೈನ್ ಸ್ಟ್ರೋಕ್‌ನಿಂದ ಸಾವು ಕ್ಯಾನ್ಸರ್ ಗೆದ್ದಿದ್ದ ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ಅವರು ಬ್ರೈನ್ ಸ್ಟ್ರೋಕ್‌ನಿಂದ ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ. ಕೋಲ್ಕತ್ತಾ: ಕ್ಯಾನ್ಸರ್ ಗೆದ್ದಿದ್ದ ಬೆಂಗಾಲಿ ನಟಿ ಐಂದ್ರಿಲಾ ಶರ್ಮಾ ಅವರು ಬ್ರೈನ್ ಸ್ಟ್ರೋಕ್‌ನಿಂದ ಭಾನುವಾರ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.ಐಂದ್ರಿಲಾ ಶರ್ಮಾ ಅವರಿಗೆ ನವೆಂಬರ್ 1 ರಂದು ಬ್ರೈನ್ ಸ್ಟ್ರೋಕ್ ಆಗಿದ್ದು, ಹೌರಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದ ಜೀವನ್ಮರಣದ ಹೋರಾಟ ನಡೆಸುತ್ತಿದ್ದ 24 ವರ್ಷದ ನಟಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮುರ್ಷಿದಾಬಾದ್ ಜಿಲ್ಲೆಯ ಐಂದ್ರಿಲಾ ಶರ್ಮಾ ಅವರು ಬಂಗಾಳಿಯ 'ಜಿಯೋನ್ ಕಥಿ', 'ಜುಮುರ್' ಮತ್ತು 'ಜಿಬಾನ್ ಜ್ಯೋತಿ' ಯಂತಹ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.ಇದನ್ನು ಓದಿ: ಮಹಾರಾಷ್ಟ್ರ: ಭಾರತ್ ಜೋಡೋ ಯಾತ್ರೆಯಲ್ಲಿ ನಟ ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ ಭಾಗಿಎರಡು ಬಾರಿ ಕ್ಯಾನ್ಸರ್ ನಿಂದ ಬದುಕುಳಿದಿದ್ದ ಐಂದ್ರಿಲಾ ಶರ್ಮಾ ಅವರು, ಕಷ್ಟಕರವಾದ ಶಸ್ತ್ರಚಿಕಿತ್ಸೆ ಮತ್ತು ಹಲವಾರು ರೌಂಡ್ ಕೀಮೋಥೆರಪಿಗೆ ಒಳಗಾಗಿದ್ದರು. ನಂತರ ಅವರು ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು.ಕ್ಯಾನ್ಸರ್ ನಿಂದ ಚೇತರಿಸಿಕೊಂಡ ನಂತರ, ಐಂದ್ರಿಲಾ ತನ್ನ ಕೆಲಸವನ್ನು ಪುನರಾರಂಭಿಸಿದರು ಮತ್ತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.