ಮೆಟ್ರೋ ಪಾಲಿಟನ್ ಸಿಟಿಯ ಜನರ ದೈನಂದಿನ ಕಥೆ ತೆರೆದಿಡುತ್ತದೆ 'ಸ್ನೇಹರ್ಷಿ': ಕಿರಣ್ ನಾರಾಯಣ್ ಕಿರಣ್ ನಾರಾಯಣ್ ನಿರ್ದೇಶನದ ಸ್ನೇಹರ್ಷಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ನಟನೆ ಮತ್ತು ನಿರ್ದೇಶನದ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಕಿರಣ್ ನಾರಾಯಣ್ ನಿರ್ದೇಶನದ ಸ್ನೇಹರ್ಷಿ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಚಿತ್ರದಲ್ಲಿ ನಟನೆ ಮತ್ತು ನಿರ್ದೇಶನದ ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ.ಸ್ನೇಹರ್ಷಿ ನನಗೆ ಮತ್ತು ನಮ್ಮ ತಂಡಕ್ಕೆ ಸಾಕಷ್ಟು ಅನುಭವ ನೀಡಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಚಿತ್ರ ವರ್ಷಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಆರಂಭವಾದ ನಂತರ ಹಲವು ಅಡೆತಡೆಗಳು ಎದುರಾದವು. ಲಾಕ್‌ಡೌನ್‌, ಚಲನಚಿತ್ರ ರಂಗದ ಕೆಲವರಿಂದ ವಂಚನೆ ಮತ್ತು ತಾಂತ್ರಿಕ ಅಡಚಣೆಗಳಿಂದ ಬಿಡುಗಡೆ ತಡವಾಯಿತು. ಅದೇನೇ ಇದ್ದರೂ, ಡಿಸೆಂಬರ್ 14 ರಂದು ನಾವು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತೇವೆ ಎಂದು ಕಿರಣ್ ಹೇಳಿದ್ದಾರೆ.ಇದು ನಮ್ಮ ಜೀವನದಲ್ಲಿ ತೆರೆದುಕೊಳ್ಳುವ ಕಥೆ. ಈ ಚಿತ್ರದಲ್ಲಿ ಹೊಸ ನಿರೂಪಣೆಯನ್ನು ಪ್ರದರ್ಶಿಸಲು ಪ್ರಯತ್ನಿಸಿದ್ದೇವೆ. ಪ್ರತಿಯೊಬ್ಬರೂ ಪ್ರತಿದಿನ ಅನುಭವಿಸುವ ಆದರೆ ವಿರಳವಾಗಿ ಚರ್ಚಿಸುವ ಕಥೆ ಇದು. ನಮ್ಮ ಚಲನಚಿತ್ರವು ಮೆಟ್ರೋಪಾಲಿಟನ್ ನಗರದ ಜೀವನದ ನಡುವೆ ಕಥೆಯನ್ನು ಚಿತ್ರಿಸುತ್ತದೆ, ಖಿನ್ನತೆಯ ಪ್ರಚಲಿತ ಸಮಸ್ಯೆಯನ್ನು ಎದುರಿಸುತ್ತದೆ. ಈ ಚಿತ್ರವನ್ನು ರೂಪಿಸಲು ನಾನು ಸಿನಿಮೀಯ ಅಂಶಗಳನ್ನು ಸಂಯೋಜಿಸಿದ್ದೇನೆ ಎಂದಿದ್ದಾರೆ.ಕಿರಣ್ ನಾರಾಯಣ್ ಜೊತೆ ಸುಧಾ ಬೆಳವಾಡಿ, ನಾಗತಿಹಳ್ಳಿ ಜಯಪ್ರಕಾಶ್, ರಂಗನಾಥ್ ಸಂಪತ್, ಉಮೇಶ್, ಚಕ್ರವರ್ತಿ, ನವೀನ್, ದೇವಕಿ, ಮಾರುತಿ, ಸೌಮ್ಯ ಮತ್ತು ಇತರರು ಸೇರಿದಂತೆ ಪ್ರತಿಭಾವಂತ ಕಲಾವಿದರು ಸಿನಿಮಾ ಭಾಗವಾಗಿದ್ದಾರೆ.ಇದನ್ನೂ ಓದಿ: 2 ವರ್ಷಗಳಿಂದ ಕಾಯ್ದಿದ್ದ ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಡಿಸೆಂಬರ್ 8ರಂದು ಹೊಸ ಸಿನಿಮಾ ಶೀರ್ಷಿಕೆ ಅನೌನ್ಸ್!ಶ್ರೀ ಮೇಲುಕೋಟೆ ಚೆಲುವ ನಾರಾಯಣ ವೆಂಚರ್ ಬ್ಯಾನರ್ ಅಡಿಯಲ್ಲಿ ನಾಗತಿಹಳ್ಳಿ ಜಯಪ್ರಕಾಶ್ ಮತ್ತು ಕಿರಣ್ ನಾರಾಯಣನ್ ಜಂಟಿಯಾಗಿ ನಿರ್ಮಿಸಿದ್ದಾರೆ. ರವಿ ಕಿಶೋರ್ ಛಾಯಾಗ್ರಹಣ ನಿರ್ವಹಿಸಿದರೆ, ಆಕಾಶ್ ಅಯ್ಯಪ್ಪನ್ ಮತ್ತು ಶ್ರೀಕಾಂತ್ ಸಂಗೀತ ಮತ್ತು ಸಂಕಲನವಿದೆ.