ದಿವ್ಯಾ ಉರುಡುಗ- ಅರವಿಂದ್ ಕೆಪಿ ನಟನೆಯ 'ಅರ್ಧಂಬರ್ದ ಪ್ರೇಮಕಥೆ' ಬಿಡುಗಡೆಗೆ ಸಿದ್ಧ ಅರವಿಂದ್ ಕೌಶಿಕ್ ನಿರ್ದೇಶನದ ದಿವ್ಯಾ ಉರುಡುಗ ನಟಿಸಿರುವ ಮುಂಬರುವ ಚಿತ್ರ 'ಅರ್ಧಂಬರ್ದ ಪ್ರೇಮಕಥೆ' ಮೂಲಕ ಬೈಕರ್-ನಟ ಅರವಿಂದ್ ಕೆಪಿ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ. ಅರವಿಂದ್ ಕೌಶಿಕ್ ನಿರ್ದೇಶನದ ದಿವ್ಯಾ ಉರುಡುಗ ನಟಿಸಿರುವ ಮುಂಬರುವ ಚಿತ್ರ 'ಅರ್ಧಂಬರ್ದ ಪ್ರೇಮಕಥೆ' ಮೂಲಕ ಬೈಕರ್-ನಟ ಅರವಿಂದ್ ಕೆಪಿ ಅವರು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರ ಡಿಸೆಂಬರ್ 1 ರಂದು ರಾಜ್ಯದಾದ್ಯಂತ ತೆರೆಗೆ ಬರಲು ಸಿದ್ಧವಾಗಿದೆ.ತುಘಲಕ್, ನಮ್ ಏರಿಯಾಲಿ ಒಂದಿನ ಮತ್ತು ಹುಲಿರಾಯ ಸಿನಿಮಾಗಳ ನಿರ್ದೇಶನಕ್ಕೆ ಹೆಸರಾದ ಅರವಿಂದ್ ಕೌಶಿಕ್, ಆಫ್-ಸ್ಕ್ರೀನ್ ಜೋಡಿ ಮತ್ತು ಮಾಜಿ ಬಿಗ್ ಬಾಸ್ ಸ್ಪರ್ಧಿಗಳನ್ನು ಅರ್ಧಂಬರ್ಧ ಪ್ರೇಮಕಥೆಯಲ್ಲಿ ಒಟ್ಟುಗೂಡಿಸಿದ್ದಾರೆ. (@aravind_kp)ಅರವಿಂದ್ ಕೆಪಿ ಮತ್ತು ದಿವ್ಯಾ ಉರುಡುಗ ಅವರು ಚಿತ್ರ ಬಿಡುಗಡೆ ದಿನಾಂಕವನ್ನು ಸೂಚಿಸುವ ಕಾರ್ಡ್ ಅನ್ನು ಬಹಿರಂಗಪಡಿಸುವ ಮೊದಲು ದೇವಸ್ಥಾನದಲ್ಲಿ ಆಶೀರ್ವಾದ ಪಡೆಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: 'ಅರ್ಧಂಬರ್ದ ಪ್ರೇಮಕಥೆ'ಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 7ರ ಜೋಡಿ ಹಕ್ಕಿ; ಚಿತ್ರದ ಮೊದಲ ಹಾಡು ರಿಲೀಸ್!ಚಿತ್ರವನ್ನು ಬಾಕ್ಸ್‌ಸೀಟ್ ಮೀಡಿಯಾ, ಆರ್‌ಎಸಿ ವಿಶುಲ್ಸ್ ಮತ್ತು ಲೈಟ್‌ಹೌಸ್ ಮೀಡಿಯಾ ಜಂಟಿಯಾಗಿ ನಿರ್ಮಿಸಿವೆ. ದಿವ್ಯಾ ಮತ್ತು ಅರವಿಂದ್ ಜೊತೆಗೆ ಅರ್ಧಂಬರ್ಧ ಪ್ರೇಮಕಥೆ ಸಿನಿಮಾದಲ್ಲಿ ರ‍್ಯಾಪರ್‌ಗಳಾದ ಅಲೋಕ್, ಶ್ರೇಯಾ ಬಾಬು, ವೆಂಕಟೇಶ ಶಾಸ್ತ್ರಿ, ಪ್ರದೀಪ್ ರೋಷನ್, ಸೂರಜ್ ಹೂಗಾರ್ ಮತ್ತು ಸುಜಿತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಹಿರಿಯ ನಟ ದ್ವಾರಕೀಶ್ ಅವರ ಪುತ್ರ ಅಭಿಲಾಷ್ ಕೂಡ ಸುದೀರ್ಘ ವಿರಾಮದ ನಂತರ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ. ಸೂರ್ಯ ಛಾಯಾಗ್ರಹಣದ ಹೊಣೆ ಹೊತ್ತಿದ್ದು, ಅರವಿಂದ್ ಅವರೇ ಚಿತ್ರಕ್ಕೆ ಹಾಡುಗಳನ್ನು ಸಂಯೋಜಿಸಿದ್ದಾರೆ.