'ಕಾಟೇರ' ಚಿತ್ರದ ನಾಯಕಿ ಲುಕ್ ನಾಳೆ ರಿವೀಲ್! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ 'ಕಾಟೇರ' ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಕ್ರಾಂತಿ ನಂತರ ಬರುತ್ತಿರುವ ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರ 'ಕಾಟೇರ' ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಕ್ರಾಂತಿ ನಂತರ ಬರುತ್ತಿರುವ ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ.ಮಾಲಾಶ್ರೀ ಪುತ್ರಿ ರಾಧನಾ ರಾಮ್ , ದರ್ಶನ್ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದು, ಅವರ ಫಸ್ಟ್ ಲುಕ್ ನಾಳೆ ಬಿಡುಗಡೆಯಾಗಲಿದೆ.ಇದನ್ನೂ ಓದಿ: ಚಾಲೆಂಜಿಂಗ್ ಸ್ಟಾರ್ ದರ್ಶನ್ 56 ನೇ ಚಿತ್ರದ ಟೈಟಲ್ ರಿವೀಲ್: 'ಕಾಟೇರ' ಮೋಷನ್ ಪೋಸ್ಟರ್ ಲಾಂಚ್ಹೌದು. ಈ ಕುರಿತು ಟ್ವೀಟ್ ಮಾಡಿರುವ ನಿರ್ದೇಶಕ ತರುಣ್ ಸುಧೀರ್, ಚಿತ್ರದ ನಾಯಕಿ ನಿಮ್ಮನ್ನೆಲ್ಲ ನಾಳೆ ಬೆಳಿಗ್ಗೆ 10ಕ್ಕೆ ಭೇಟಿಯಾಗಲು ಸಜ್ಜಾಗಿದ್ದಾಳೆ ಎಂದು ತಿಳಿಸಿದ್ದಾರೆ.ನಮ್ಮ #ಕಾಟೇರ ಚಿತ್ರದ ನಾಯಕಿ ನಿಮ್ಮನ್ನೆಲ್ಲ ನಾಳೆ ಬೆಳಿಗ್ಗೆ 10ಕ್ಕೆ ಭೇಟಿಯಾಗಲು ಸಜ್ಜಾಗಿದ್ದಾಳೆ # 10am! !! # @ @ @Radhanaram_ ../p3YLbUggZ6