’ಕಾಳಿ’ ಮಾತೆ ಕೈಯಲ್ಲಿ ಸಿಗರೇಟು; ವಿವಾದಕ್ಕೀಡಾದ ನಿರ್ದೇಶಕಿ ಲೀನಾ, ಹಿಂದೂಪರ ಸಂಘಟನೆಗಳ ಆಕ್ರೋಶ ಹಿಂದೂಗಳ ದೇವತೆ ಕಾಳಿಮಾತೆಯನ್ನು ವಿವಾದಾತ್ಮಕವಾಗಿ ಚಿತ್ರಿಸಿದ ಆರೋಪದ ಮೇರೆಗೆ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಚೆನ್ನೈ: ಹಿಂದೂಗಳ ದೇವತೆ ಕಾಳಿಮಾತೆಯನ್ನು ವಿವಾದಾತ್ಮಕವಾಗಿ ಚಿತ್ರಿಸಿದ ಆರೋಪದ ಮೇರೆಗೆ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿದ್ದಾರೆ. - @ “ ” : ://./RAQimMt7Ln ://./D5ywx1Y7Wu@ @ @ ../L8LDDnctC9ಹೌದು.. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ವಿರುದ್ಧ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ತಮಿಳುನಾಡಿನ ಲೀನಾ ಮಣಿಮೇಕಲೈ ಅವರು ‘ಕಾಳಿ‘ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದು, ಶನಿವಾರ ಅವರು ಈ ಸಾಕ್ಷ್ಯಚಿತ್ರದ ಪೋಸ್ಟರ್‌ ಅನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಹಿಂದೂ ದೇವತೆ ಕಾಳಿ ಮಾತೆ ಸಿಗರೇಟ್ ಸೇದುತ್ತಿರುವುದು ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂ() ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿದೆ. ಇದನ್ನೂ ಓದಿ: ವಿಕ್ರಾಂತ್ ರೋಣನ 'ಲಾಲಿ' ಹಾಡಿನಲ್ಲಿ ತಂದೆಯ ಪ್ರಾಮಾಣಿಕತೆ ಮತ್ತು ಬೇಷರತ್ತಾದ ಪ್ರೀತಿಯಿದೆ: ಸುದೀಪ್ಈ ಪೋಸ್ಟರ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಲೀನಾ ಮಣಿಮೇಕಲೈ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಲಾಗುತ್ತಿದೆ. ಟ್ವಿಟರ್‌ನಲ್ಲಿ ಅರೆಸ್ಟ್‌ ಲೀನಾ ಮಣಿಮೇಕಲೈ (#) ಹ್ಯಾಶ್‌ಟ್ಯಾಗ್‌ ಟ್ರೆಂಡ್‌ ಆಗಿದ್ದು, ಸಾವಿರಾರು ಬಳಕೆದಾರರು ಲೀನಾ ಅವರನ್ನು ಬಂಧಿಸಬೇಕು ಎಂದು ಪ್ರಧಾನ ಮಂತ್ರಿ ಕಚೇರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಐಶ್ವರ್ಯಾ ರೈ ನಟನೆಯ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್-1' ಮೋಷನ್ ಪೋಸ್ಟರ್ ಬಿಡುಗಡೆ2021 ರಲ್ಲಿ, ಸೈಫ್ ಅಲಿ ಖಾನ್ ಅಭಿನಯದ ವೆಬ್ ಸರಣಿ 'ತಾಂಡವ್' ನಲ್ಲಿ ಹಿಂದೂ ದೇವರುಗಳನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಕಾರಣಕ್ಕಾಗಿ ಧಾರ್ಮಿಕ ಉದ್ವಿಗ್ನತೆಯ ಸಾಧ್ಯತೆಯನ್ನು ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.