'ಈ ಪಟ್ಟಣಕ್ಕೆ ಏನಾಗಿದೆ' ಚಿತ್ರಕ್ಕಿದ್ದ ಸೆನ್ಸಾರ್‌ ಅಡೆತಡೆ ದೂರ, ಆಗಸ್ಟ್‌ನಲ್ಲಿ ಬಿಡುಗಡೆಗೆ ಸಿದ್ಧತೆ ತಮ್ಮ ನಿಜ ಜೀವನದಲ್ಲಿ ಕಂಡ ವಿವಿಧ ಘಟನೆಗಳಿಂದ ಸ್ಫೂರ್ತಿ ಪಡೆದು ನಿರ್ಮಿಸಿರುವ ಚಿತ್ರ ರವಿ ಸುಬ್ಬಾ ರಾವ್ ಅವರ 'ಈ ಪಟ್ಟಣಕ್ಕೆ ಏನಾಗಿದೆ' ಸಿನಿಮಾ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ. ಬೆಂಗಳೂರಿನಲ್ಲಿ ಸೆನ್ಸಾರ್ ಆಗಲಿಲ್ಲ ಎಂಬ ಕಾರಣಕ್ಕೆ ಚಿತ್ರತಂಡ ಹೈದರಾಬಾದ್ಗೆ ತೆರಳಿತ್ತು. ತಮ್ಮ ನಿಜ ಜೀವನದಲ್ಲಿ ಕಂಡ ವಿವಿಧ ಘಟನೆಗಳಿಂದ ಸ್ಫೂರ್ತಿ ಪಡೆದು ನಿರ್ಮಿಸಿರುವ ಚಿತ್ರ ರವಿ ಸುಬ್ಬಾ ರಾವ್ ಅವರ 'ಈ ಪಟ್ಟಣಕ್ಕೆ ಏನಾಗಿದೆ' ಸಿನಿಮಾ ಕೊನೆಗೂ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಆಕ್ಷೇಪಾರ್ಹ ದೃಶ್ಯಗಳಿಂದಾಗಿ ಹಲವು ಸಿನಿಮಾಗಳಿಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಸೂಕ್ಷ್ಮವಾಗಿ ಎಲ್ಲಾ ಚಿತ್ರಗಳನ್ನು ಗಮನಿಸುತ್ತಿದೆ. ಕನ್ನಡದ ಈ ಚಿತ್ರಕ್ಕೂ ಸೆನ್ಸಾರ್ ಮಂಡಳಿಯ ಗ್ರೀನ್ ಸಿಗ್ನಲ್ ಸಿಗುವುದು ಕಷ್ಟವಾಗಿತ್ತು.ಬೆಂಗಳೂರಿನಲ್ಲಿ ಸೆನ್ಸಾರ್ ಆಗಲಿಲ್ಲ ಎಂಬ ಕಾರಣಕ್ಕೆ ಚಿತ್ರತಂಡ ಹೈದರಾಬಾದ್ಗೆ ತೆರಳಿತ್ತು. ಇದೀಗ ಯಶಸ್ವಿಯಾಗಿ ಸೆನ್ಸಾರ್ ಮಂಡಳಿಯಿಂದ ಪ್ರಮಾಣ ಪತ್ರ ಪಡೆದಿರುವ 'ಈ ಪಟ್ಟಣಕ್ಕೆ ಏನಾಗಿದೆ' ಚಿತ್ರವು ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. “ ?” 1st . ’ . ../p5ue9f25kGಕೆಲವು ಸನ್ನಿವೇಶಗಳನ್ನು ನೈಜವಾಗಿ ಚಿತ್ರೀಕರಿಸಿರುವುದರಿಂದಾಗಿ ಕರ್ನಾಟಕದಲ್ಲಿ ಪ್ರಮಾಣಪತ್ರ ಪಡೆಯುವಲ್ಲಿ ತೊಂದರೆ ಉಂಟಾಗಿತ್ತು. ಹೀಗಾಗಿ, ಚಿತ್ರತಂಡ ಅಂತಿಮವಾಗಿ ಹೈದರಾಬಾದ್‌ನಿಂದ ಪ್ರಮಾಣೀಕರಣವನ್ನು ಪಡೆದಿದೆ. ಈ ಹಿನ್ನೆಲೆಯಲ್ಲಿ ಅವರು ಚಿತ್ರದ ಕೆಲವು ಭಾಗಗಳಿಗೆ ಕತ್ತರಿ ಹಾಕಬೇಕಾಯಿತು. ಪರಿಣಾಮವಾಗಿ ಚಿತ್ರಕ್ಕೆ 'ಎ' ಪ್ರಮಾಣಪತ್ರ ದೊರೆತಿದೆ.ರವಿ ಸುಬ್ಬಾ ರಾವ್ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದು, ನಾಯಕರಾಗಿಯೂ ನಟಿಸಿದ್ದಾರೆ. ಅವರು ತಮ್ಮ ಸ್ನೇಹಿತ ರಿತೇಶ್ ಜೋಶಿ ಅವರೊಂದಿಗೆ ಸೇರಿ ಚಿತ್ರದ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರತಂಡ ಈಗ ಆಗಸ್ಟ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ.ಚಿತ್ರದ ಕಥಾವಸ್ತುವು ಜೂಜು ಮತ್ತು ಬೆಟ್ಟಿಂಗ್ ಮಾಫಿಯಾದ ಸುತ್ತ ಸುತ್ತುತ್ತದೆ. ಈ ಭೂಗತ ಜಗತ್ತಿನ ಅಪಾಯಕಾರಿ ಆಮಿಷವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ. ರಾಧಿಕಾ ರಾಮ್ ನಾಯಕಿಯಾಗಿ ನಟಿಸಿದ್ದು, ಪ್ರಮುಖ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅನಿಲ್ ಸಿಜೆ ಸಂಗೀತ ಸಂಯೋಜಿಸಿದ್ದಾರೆ.