ಗಣೇಶ ಚತುರ್ಥಿಯಂದು ‘ಹಿರಣ್ಯ’ ಪೋಸ್ಟರ್ ರಿಲೀಸ್: ಮಾಸ್ ಲುಕ್ ನಲ್ಲಿ ರಾಜವರ್ಧನ್! ಬಿಚ್ಚುಗತ್ತಿ ನಾಯಕ ರಾಜವರ್ಧನ್ ಹಿರಣ್ಯ ಸಿನಿಮಾ ಶೂಟಿಂಗ್ ಮುಗಿಸಿದ್ದು, ಗಣೇಶ ಚತುರ್ಥಿಯ ಶುಭ ಸಂದರ್ಭದಂದು ಸಿನಿಮಾದ ಫರ್ಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಬಿಚ್ಚುಗತ್ತಿ ನಾಯಕ ರಾಜವರ್ಧನ್ ಹಿರಣ್ಯ ಸಿನಿಮಾ ಶೂಟಿಂಗ್ ಮುಗಿಸಿದ್ದು, ಗಣೇಶ ಚತುರ್ಥಿಯ ಶುಭ ಸಂದರ್ಭದಂದು ಸಿನಿಮಾದ ಫರ್ಸ್ಟ್ ಲುಕ್ ರಿವೀಲ್ ಮಾಡಿದ್ದಾರೆ.ಪ್ರವೀಣ್ ಅವ್ಯುಕ್ತ್ ನಿರ್ದೇಶನದ ಈ ಸಿನಿಮಾ ಮಾಸ್ ಎಂಟರ್ಟೈನರ್ ಆಗಿದೆ. ಪ್ರಣಯಂಮದಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಳ್ಳಲಿರುವ ಬಿಚ್ಚುಗತ್ತಿ ನಟ ಹಿರಣ್ಣಯ್ಯನಲ್ಲಿ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದಯ ಮತ್ತು ಯಾವುದೇ ಭಾವನೆಗಳಿಲ್ಲದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ. ಒಂದೇ ಶೆಡ್ಯೂಲ್‌ನಲ್ಲಿ 75 ದಿನಗಳ ಕಾಲ ಚಿತ್ರೀಕರಣ ನಡೆಸಿರುವುದಾಗಿ ರಾಜವರ್ದನ್ ತಿಳಿಸಿದ್ದಾರೆ.ಇದನ್ನೂ ಓದಿ: ಫ್ರೆಂಡ್ ಜೊತೆ ಕೆಲಸ ಮಾಡುವಾಗ 'ಕಂಫರ್ಟ್ ಝೋನ್' ಇರುತ್ತೆ: 'ಹಿರಣ್ಯ' ತಂಡ ಸೇರಿದ ದಿವ್ಯಾ ಸುರೇಶ್!ಚಿತ್ರವು ಐದು ಫೈಟ್‌ಗಳನ್ನು ಒಳಗೊಂಡಿದೆ. ಸ್ಟಂಟ್ ಮಾಸ್ಟರ್‌ಗಳಾದ ವಿನೋದ್, ಟೈಗರ್ ಶಿವ ಮತ್ತು ಅರ್ಜುನ್ ಅವರ ನೃ ಕೊರಿಯೊಗ್ರಫಿ ಮಾಡಿದ್ದಾರೆ. ಹಿರಣ್ಯ ಸಿನಿಮಾವನ್ನು ವಿಘ್ನೇಶ್ವರ ಯು ಮತ್ತು ವಿಜಯ್ ಕುಮಾರ್ ಬಿವಿ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ, ದಿವ್ಯಾ ಸುರೇಶ್ ಮತ್ತು ರಿಹಾನಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರಕ್ಕೆ ಜೂಡಾ ಸ್ಯಾಂಡಿ ಅವರ ಸಂಗೀತ ಮತ್ತು ಯೋಗೇಶ್ವರನ್ ಅವರ ಛಾಯಾಗ್ರಹಣವಿದೆ.