ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಫೆಬ್ರವರಿ 24 ಕ್ಕೆ 'ವಿಕ್ರಾಂತ್ ರೋಣ' ರಿಲೀಸ್ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡದಿಂದ ಈಗ ರಿಲೀಸ್ ದಿನಾಂಕಕೂಡ ಘೋಷಣೆ ಆಗಿದೆ. 2022ರ ಫೆಬ್ರವರಿ 24ರಂದು ವಿಶ್ವಾದ್ಯಂತ ‘ವಿಕ್ರಾಂತ್ ರೋಣ’ ತೆರೆಕಾಣಲಿದೆ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಸಜ್ಜಾಗಿದೆ. ಚಿತ್ರತಂಡದಿಂದ ಈಗ ರಿಲೀಸ್ ದಿನಾಂಕಕೂಡ ಘೋಷಣೆ ಆಗಿದೆ. 2022ರ ಫೆಬ್ರವರಿ 24ರಂದು ವಿಶ್ವಾದ್ಯಂತ ‘ವಿಕ್ರಾಂತ್ ರೋಣ’ ತೆರೆಕಾಣಲಿದೆ.ರಿಲೀಸ್ ಡೇಟ್ ಅನೌನ್ಸ್ ಮಾಡಲು ‘ವಿಕ್ರಾಂತ್ ರೋಣ’ ತಂಡ ಒಂದು ಟೀಸರ್ ಬಿಡುಗಡೆ ಮಾಡಿದೆ. ಕಿಚ್ಚ ಸುದೀಪ್ ಅವರು ಬೈಕ್ ಏರಿ ಖಡಕ್ ಪೋಸ್ ನೀಡಿದ್ದಾರೆ. ದಟ್ಟ ಕಾನನದ ಹಿನ್ನೆಲೆಯಲ್ಲಿ ಈ ಕಥೆ ಸಾಗಲಿದೆ ಎಂಬುದನ್ನು ಈ ಟೀಸರ್ ಸಾರಿ ಹೇಳುತ್ತಿದೆ. ‘2022ರ ಫೆ.24ರಂದು ಈ ಜಗತ್ತಿಗೆ ಹೊಸ ಹೀರೋ ಸಿಗಲಿದ್ದಾನೆ’ ಎಂಬ ಕ್ಯಾಪ್ಷನ್ ಗಮನ ಸೆಳೆಯುತ್ತಿದೆ.ಝೀ ಸ್ಟುಡಿಯೋಸ್ ಪ್ರಸ್ತುತಪಡಿಸುತ್ತಿರುವ ವಿಕ್ರಾಂತ್ ರೋಣ ಬಹುಭಾಷಾ ಸಾಹಸ ಸಿನಿಮಾವಾಗಿದ್ದು, 14 ಭಾಷೆಗಳಲ್ಲಿ ಮತ್ತು 55 ದೇಶಗಳಲ್ಲಿ 3-ಡಿ ರಿಲೀಸ್ ಕಾಣಲಿದೆ. ಅನುಪ್ ಭಂಡಾರಿ ನಿರ್ದೇಶನದ ಈ ಚಿತ್ರವನ್ನು ಮಂಜುನಾಥ್ ಗೌಡ ಮತ್ತು ಶಾಲಿನಿ ಮಂಜುನಾಥ್ ನಿರ್ಮಿಸಿದ್ದಾರೆ ಮತ್ತು ಅಲಂಕಾರ್ ಪಾಂಡಿಯನ್ ಸಹ-ನಿರ್ಮಾಣ ಮಾಡಿದ್ದಾರೆ.ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ಜಾಕ್ ಮಂಜುನಾಥ್ ಹಾಗೂ ಅಲಂಕಾರ್ ಪಾಂಡಿಯನ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟೀಸರ್ ಮೂಲಕ ‘ವಿಕ್ರಾಂತ್ ರೋಣ’ ಭರ್ಜರಿ ಸೌಂಡ್ ಮಾಡಿದೆ. ಕಿಚ್ಚನ ಗೆಟಪ್ ಕಂಡು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಸಿನಿಮಾ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ವಿಶೇಷ ಏನೆಂದರೆ, 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.ಇದನ್ನೂ ಓದಿ: 'ವಿಕ್ರಾಂತ್‌ ರೋಣ ಭಾರತೀಯ ಕಥೆಯನ್ನು ವಿಶ್ವಮಟ್ಟದಲ್ಲಿ ಹೇಳುವಂತಹ ಮಹತ್ವಾಕಾಂಕ್ಷೆಯ ಸಿನಿಮಾ'ಜನರಿಂದ ಉತ್ತಮ ಬೆಂಬಲ ಸಿಕ್ಕಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಈ ಚಿತ್ರದ ಮೂಲಕ ಜನರನ್ನು ರಂಜಿಸಲು ಮತ್ತು ಮಿಸ್ಟರಿ-ಥ್ರಿಲ್ಲರ್ ಸಿನಿಮಾವನ್ನು ದೊಡ್ಡ ರೀತಿಯಲ್ಲಿ ಮರುಪರಿಚಯಿಸಲು ನಾವು ಬಯಸುತ್ತೇವೆ ಎಂದು ನಿರ್ಮಾಪಕ ಮಂಜುನಾಥ ಗೌಡ ಹೇಳಿದ್ದಾರೆ.ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣ ಎಂಬ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ. ತಾರಾಗಣದಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಕೂಡ ಇದ್ದಾರೆ. ತಮ್ಮ ಸಿನಿಮಾವನ್ನು ಎಲ್ಲಾ ಭಾಷೆಯ ಜನ ಪ್ರೀತಿಯಿಂದ ಸ್ವಾಗತಿಸಲಿದ್ದಾರೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಹೇಳಿದ್ದಾರೆ.3ಡಿ ಅವತರಣಿಕೆಯಲ್ಲಿ ‘ವಿಕ್ರಾಂತ್ ರೋಣ’ ರಿಲೀಸ್ ಆಗಲಿರುವುದು ಕೂಡ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ‘ರಂಗಿತರಂಗ’ ಖ್ಯಾತಿಯ ನಟ ನಿರೂಪ್ ಭಂಡಾರಿ ಕೂಡ ಇದರಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ವಿಶೇಷ ಎಂದರೆ, ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಒಂದು ಸ್ಪೆಷಲ್ ಸಾಂಗ್ನಲ್ಲೂ ಅವರು ಡ್ಯಾನ್ಸ್ ಮಾಡಿದ್ದಾರೆ. ಅವರ ಪಾತ್ರಕ್ಕೆ ಗಡಂಗ್ ರಕ್ಕಮ್ಮ ಎಂದು ಹೆಸರು ಇಡಲಾಗಿದೆ. ಹೀಗೆ ‘ವಿಕ್ರಾಂತ್ ರೋಣ’ ಸಿನಿಮಾದಲ್ಲಿ ಹತ್ತು ಹಲವು ವಿಶೇಷತೆಗಳಿವೆ.