ದೃಶ್ಯ-2 ಸಾಕಷ್ಟು ಕನ್ನಡದ ಸ್ಥಳೀಯತೆಯನ್ನು ಹೊಂದಿರುತ್ತದೆ: ಪಿ ವಾಸು ದೃಶ್ಯ ಸಿನಿಮಾದ ಸೀಕ್ವೆಲ್ ಆಗಿರುವ ದೃಶ್ಯ-2 ಸಿನಿಮಾವನ್ನು ಪಿ ವಾಸು ನಿರ್ದೇಶಿಸಿದ್ದು, ಎರಡನೇ ಬಾರಿಗೆ ರವಿಚಂದ್ರನ್ ಅಭಿನಯದ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ದೃಶ್ಯ ಸಿನಿಮಾದ ಸೀಕ್ವೆಲ್ ಆಗಿರುವ ದೃಶ್ಯ-2 ಸಿನಿಮಾವನ್ನು ಪಿ ವಾಸು ನಿರ್ದೇಶಿಸಿದ್ದು, ಎರಡನೇ ಬಾರಿಗೆ ರವಿಚಂದ್ರನ್ ಅಭಿನಯದ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅನಂತ್ ನಾಗ್, ನವ್ಯಾ ನಾಯರ್, ಪ್ರಮೋದ್ ಶೆಟ್ಟಿ, ಆರೋಹಿ ನಾರಾಯಣ್, ಉನ್ನತಿ, ಆಶಾ ಶರತ್, ಪ್ರಭು ಅವರು ಮುಖ್ಯ ಭೂಮಿಕೆಯಲ್ಲಿದ್ದು, ಶುಕ್ರವಾರದಂದು ಬಿಡುಗಡೆಯಾಗಲಿದೆ.ಕನ್ನಡದಲ್ಲಿ ಏನು ಬದಲಾವಣೆ ಮಾಡಲಾಗಿದೆ ಎನ್ನುವುದನ್ನು ನೋಡಿದರೆ, ಚಿತ್ರೀಕರಣ ಮಾಡಿರುವ ಸ್ಥಗಳ, ವಾತಾವಾರಣ, ಪಾತ್ರಗಳಲ್ಲಿ ಕನ್ನಡದ ಸ್ಥಳೀಯತೆ ಕಾಣಸಿಗಲಿವೆ ಎನ್ನುತ್ತಾರೆ ಪಿ ವಾಸು."ಪ್ರತಿಯೊಂದು ಪಾತ್ರದಿಂದ ಹೊರಬಂದಿರುವ ಭಾವನಾತ್ಮಕ ಅಂಶ ಸಿನಿಮಾದ ಆಕರ್ಷಣೆಯಾಗಿದೆ. ರವಿಚಂದ್ರನ್ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಮಿಂಚಿದ್ದು, ಪಾತ್ರದಲ್ಲಿ ಅವರು ಮಾಡಿರುವ ಸಣ್ಣ ಗಿಮಿಕ್ ಗಳು ವೀಕ್ಷಕರಿಗೆ ಆ ಪಾತ್ರದೊಂದಿಗೆ ಕನೆಕ್ಟ್ ಆಗುತ್ತದೆ" ಎಂದು ವಾಸು ಹೇಳಿದ್ದಾರೆ. "ತನಿಖೆಯ ಭಾಗ ಯಥವಾತ್ ಆಗಿರಲಿದ್ದರೂ, ಕಾಮಿಡಿ ಭಾಗದಲ್ಲಿ ಸಾಧುಕೋಕಿಲಾ ಮಿಂಚಿದ್ದು, ಬದಲಾವಣೆಗಳನ್ನು ಕಾಣಬಹುದಾಗಿದೆ" ಎಂದು ವಾಸು ತಿಳಿಸಿದ್ದಾರೆ.