ರಶ್ಮಿಕಾ ಮಂದಣ್ಣಗೆ 28 ನೇ ಹುಟ್ಟುಹಬ್ಬ: ಪುಷ್ಪ 2, ದಿ ಗರ್ಲ್ ಫ್ರೆಂಡ್ ಚಿತ್ರಗಳ ಫಸ್ಟ್ ಲುಕ್ ಪೋಸ್ಟರ್ ಅನಾವರಣ ನ್ಯಾಷನಲ್ ಕ್ರಷ್' ರಶ್ಮಿಕಾ ಮಂದಣ್ಣ ಅವರಿಗೆ 28ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿನಯದ ಪುಷ್ಪ 2 ಹಾಗೂ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಲುಕ್ ಫೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ. ಬೆಂಗಳೂರು: 'ನ್ಯಾಷನಲ್ ಕ್ರಷ್' ರಶ್ಮಿಕಾ ಮಂದಣ್ಣ ಅವರಿಗೆ 28ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಅಭಿನಯದ ಪುಷ್ಪ 2 ಹಾಗೂ ದಿ ಗರ್ಲ್ ಫ್ರೆಂಡ್ ಚಿತ್ರದ ಫಸ್ಟ್ ಲುಕ್ ಫೋಸ್ಟರ್ ಗಳನ್ನು ಬಿಡುಗಡೆ ಮಾಡಲಾಗಿದೆ.ಪುಷ್ಪ 2 ಚಿತ್ರದ ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಫೋಸ್ಟರ್ ನಲ್ಲಿ ಸೀರೆ ಗೆಟಪ್, ಜೊತೆಗೆ ಸಾಕಷ್ಟು ಅಭರಣ ತೊಟ್ಟು ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 15 ರಂದು ಚಿತ್ರ ಬಿಡುಗಡೆ ಆಗಲಿದೆ ಎಂದು ಪೋಸ್ಟರ್ ನಲ್ಲಿ ಬರೆಯಲಾಗಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ನಾಯಕ ನಟನಾಗಿ ಅಭಿನಯಿಸಿದ್ದಾರೆ. 𝒏𝒂𝒕𝒊𝒐𝒏'𝒔 𝒉𝒆𝒂𝒓𝒕𝒕𝒉𝒓𝒐𝒃 '' @ 🫰🏻#Pushpa2TheRuleTeaser 8th 🔥# 💥#Pushpa2TheRule 15th 2024. @ @ #… ../AnsbEXZqJTದಿ ಗರ್ಲ್ ಫ್ರೆಂಡ್ ಚಿತ್ರ ತಂಡ ಕೂಡಾ ಫೋಸ್ಟರ್ ಬಿಡುಗಡೆ ಮೂಲಕ ರಶ್ಮಿಕಾ ಮಂದಣ್ಣ ಅವರಿಗೆ ಶುಭ ಕೋರಿದೆ. ಸದ್ಯ ಹುಟ್ಟುಹಬ್ಬ ಆಚರಿಸಿಕೊಳ್ಳಲು ಅಬುದಾಬಿಗೆ ರಶ್ಮಿಕಾ ಮಂದಣ್ಣ ತೆರಳಿದ್ದಾರೆ. . ' 🫰🏻❤️ # 🫰🏻😍 , & @ ✨@ @23_rahulr @ # @… ../850RWKE8mD