ಇನ್ನು 'ಯುವ' ಪರ್ವ ಆರಂಭ: ಅದ್ಧೂರಿ ಕಾರ್ಯಕ್ರಮದ ಮೂಲಕ ಚಿತ್ರರಂಗಕ್ಕೆ ಯುವ ರಾಜ್ ಕುಮಾರ್ ಭರ್ಜರಿ ಎಂಟ್ರಿ! ಡಾ.ರಾಜ್ ಕುಮಾರ್ ಕುಟುಂಬದ ಎರಡನೇ ತಲೆಮಾರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ಕುಮಾರ್ ( ) ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಭರ್ಜರಿಯಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬೆಂಗಳೂರು: ಡಾ.ರಾಜ್ ಕುಮಾರ್ ಕುಟುಂಬದ ಎರಡನೇ ತಲೆಮಾರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವ ರಾಜ್ಕುಮಾರ್ ( ) ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮೂಲಕ ಭರ್ಜರಿಯಾಗಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.ಪುನೀತ್ ರಾಜ್ ಕುಮಾರ್ ಅವರ ಉತ್ತರಾಧಿಕಾರಿ ಎಂಬಂತೆ ಅವರ ಅಭಿಮಾನಿಗಳು ಬಿಂಬಿಸುತ್ತಿದ್ದಾರೆ. ಯುವ ರಾಜ್ ಕುಮಾರ್ ನಟಿಸುತ್ತಿರುವ ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಿನ್ನೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಿತು.ಚಿತ್ರಕ್ಕೆ ‘ಯುವ’ ಎಂದು ಹೆಸರಿಡಲಾಗಿದ್ದು, ಸಿನಿಮಾದ ಮುಹೂರ್ತ ನಡೆದಿದೆ. ಪುನೀತ್ ರಾಜ್ ಕುಮಾರ್ ಅವರ ರಾಜಕುಮಾರ, ಯುವರತ್ನ ನಿರ್ದೇಶಿಸಿದ್ದ ಸಂತೋಷ್ ಆನಂದ್ ರಾಮ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.ಇದನ್ನೂ ಓದಿ: ಯುವ ರಾಜಕುಮಾರ್ ಚೊಚ್ಚಲ ಸಿನಿಮಾಗೆ ರುಕ್ಷ್ಮಿಣಿ ವಸಂತ್ ನಾಯಕಿ!ನಿನ್ನೆ ಚಿತ್ರದ ಮುಹೂರ್ತದಲ್ಲಿ ದೊಡ್ಮನೆ ಕುಟುಂಬ ಭಾಗಿ ಆಗಿತ್ತು. ಇದರ ಜೊತೆಗೆ ಜಗ್ಗೇಶ್, ರಿಷಬ್ ಶೆಟ್ಟಿ ಮೊದಲಾದ ಸ್ಟಾರ್ಸ್ಗಳು ಭಾಗಿ ಆಗಿದ್ದರು. ಯುವ ರಾಜ್ಕುಮಾರ್ ಲಾಂಚ್ ಸಾಕಷ್ಟು ಅದ್ದೂರಿಯಾಗಿ ನಡೆದಿದೆ.