68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅತ್ಯುತ್ತಮ ನಟ ಪ್ರಶಸ್ತಿ ಸ್ವೀಕರಿಸಿದ ಸೂರ್ಯ, ಅಜಯ್ ದೇವಗನ್ ಸೂರರೈ ಪೊಟ್ರು ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ ಚಿತ್ರದ ಅಭಿನಯಕ್ಕಾಗಿ ನಟ ಸೂರ್ಯ ಮತ್ತು ಅಜಯ್ ದೇವಗನ್ ಅವರು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗಳನ್ನು ಹಂಚಿಕೊಂಡಿದ್ದಾರೆ. ನವದೆಹಲಿ: ಸೂರರೈ ಪೊಟ್ರು ಮತ್ತು ತನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ ಚಿತ್ರದ ಅಭಿನಯಕ್ಕಾಗಿ ನಟ ಸೂರ್ಯ ಮತ್ತು ಅಜಯ್ ದೇವಗನ್ ಅವರು ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿಗಳನ್ನು ಹಂಚಿಕೊಂಡಿದ್ದಾರೆ. 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ಶುಕ್ರವಾರ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಿತು. ಈ ವೇಳೆ ತಮಿಳು ನಟ ಸೂರ್ಯ ಹಾಗೂ ಬಾಲಿವುಡ್ ನಟ ಅಜಯ್ ದೇವಗನ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು.ಅಜಯ್ ದೇವಗನ್ ಅವರಿಗೆ ಇದು ಮೂರನೇ ಅತ್ಯುತ್ತಮ ನಟ ಪ್ರಶಸ್ತಿಯಾಗಿದೆ. ಅವರು ಈ ಹಿಂದೆ 1998 ರ ಚಲನಚಿತ್ರ ಝಖ್ಮ್ ಮತ್ತು ದಿ ಲೆಜೆಂಡ್ ಆಫ್ ಭಗತ್ ಸಿಂಗ್ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.ಇದನ್ನು ಓದಿ: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸಂಚಾರಿ ವಿಜಯ್ ರ ತಲೆದಂಡ ಸೇರಿ ಕನ್ನಡದ 3 ಚಿತ್ರಗಳಿಗೆ ಪ್ರಶಸ್ತಿಸೂರರೈ ಪೊಟ್ರು ಚಿತ್ರಕ್ಕಾಗಿ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ಸೂರರೈ ಪೊಟ್ರು ಅತ್ಯುತ್ತಮ ಚಿತ್ರಕಥೆ ಮತ್ತು ಅತ್ಯುತ್ತಮ ಹಿನ್ನೆಲೆ ಸಂಗೀತ ಮತ್ತು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದೆ.ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ: (ಫೀಚರ್ ಫಿಲ್ಮ್ಸ್ ) ಅತ್ಯುತ್ತಮ ಚಲನಚಿತ್ರ: ಸೂರರೈ ಪೊಟ್ರು ಅತ್ಯುತ್ತಮ ನಿರ್ದೇಶನ: ಸಚಿ, ಅಯ್ಯಪ್ಪನಂ ಕೊಶಿಯುಮ್ ಅತ್ಯುತ್ತಮ ನಟಿ: ಅಪರ್ಣಾ ಬಾಲಮುರಳಿ, ಸೂರರೈ ಪೊಟ್ರು ಅತ್ಯುತ್ತಮ ನಟ: ಅಜಯ್ ದೇವಗನ್ (ತಾನ್ಹಾಜಿ) ಸೂರ್ಯ (ಸೂರರೈ ಪೊಟ್ರು) ಅತ್ಯುತ್ತಮ ಪೋಷಕ ನಟಿ: ಲಕ್ಷ್ಮಿ ಪ್ರಿಯಾ ಚಂದ್ರಮೌಳಿ, ಶಿವರಂಜನಿಯುಂ ಇನ್ನುಮ್ ಸಿಲಾ ಪೆಂಗಲುಮ್ ಅತ್ಯುತ್ತಮ ಪೋಷಕ ನಟ: ಬಿಜು ಮೆನನ್, ಎಕೆ ಅಯ್ಯಪ್ಪನಂ ಕೋಶಿಯುಮ್ ಅತ್ಯುತ್ತಮ ತೆಲುಗು ಚಿತ್ರ: ಕಲರ್ ಫೋಟೋ ಅತ್ಯುತ್ತಮ ತಮಿಳು ಚಿತ್ರ: ಶಿವರಂಜನಿಯುಂ ಇನ್ನುಮ್ ಸಿಲಾ ಪೆಂಗಲ್ಲುಮ್ ಅತ್ಯುತ್ತಮ ಮಲಯಾಳಂ ಚಿತ್ರ: ತಿಂಕಲಜ್ಚ ನಿಶ್ಚಯಂ ಅತ್ಯುತ್ತಮ ಮರಾಠಿ ಚಿತ್ರ: ಗೋಷ್ಟ ಏಕ ಪೈತಾನಿಚಿ ಅತ್ಯುತ್ತಮ ಕನ್ನಡ ಚಿತ್ರ: ಡೊಳ್ಳು ಅತ್ಯುತ್ತಮ ಹಿಂದಿ ಚಿತ್ರ: ಟೂಲ್‌ಸಿದಾಸ್ ಜೂನಿಯರ್ ಅತ್ಯುತ್ತಮ ಬೆಂಗಾಲಿ ಚಿತ್ರ: ಅವಿಜಾಟ್ರಿಕ್ ಅತ್ಯುತ್ತಮ ಅಸ್ಸಾಮಿ ಚಿತ್ರ: ಬ್ರಿಡ್ಜ್ ವಿಶೇಷ ಉಲ್ಲೇಖ: ವಾಂಕು (ಮಲಯಾಳಂ), ಜೂನ್ (ಮರಾಠಿ), ಅವ್ವಾಂಚಿತ್ (ಮರಾಠಿ), ಗೊಡಕಾತ್ (ಮರಾಠಿ), ಟೂಲ್ಸಿದಾಸ್ ಜೂನಿಯರ್ (ಹಿಂದಿ) ಅತ್ಯುತ್ತಮ ತುಳು ಚಿತ್ರ: ಜೀತಿಗೆ ಅತ್ಯುತ್ತಮ ಹರ್ಯಾನ್ವಿ ಚಿತ್ರ: ದಾದಾ ಲಕ್ಷ್ಮಿ ಅತ್ಯುತ್ತಮ ದಿಮಾಸಾ ಚಿತ್ರ: ಸೆಂಖೋರ್ ಅತ್ಯುತ್ತಮ ಸಾಹಸ ನಿರ್ದೇಶನ: ಎಕೆ ಅಯ್ಯಪ್ಪನಂ ಕೊಶಿಯುಮ್ ಅತ್ಯುತ್ತಮ ನೃತ್ಯ ಸಂಯೋಜನೆ: ನಾಟ್ಯಂ (ತೆಲುಗು) ಅತ್ಯುತ್ತಮ ಸಾಹಿತ್ಯ: ಸೈನಾ ಅತ್ಯುತ್ತಮ ಸಂಗೀತ ನಿರ್ದೇಶನ: ಅಲಾ ವೈಕುಂಠಪುರಮುಲೋ (ಹಾಡುಗಳು): ಥಮನ್ ಎಸ್ (ಹಿನ್ನೆಲೆ): ಸೂರರೈ ಪೊಟ್ರು ಅತ್ಯುತ್ತಮ ಮೇಕಪ್: ನಾಟ್ಯಂ ಅತ್ಯುತ್ತಮ ನಿರ್ಮಾಣ ವಿನ್ಯಾಸ: ಕಪ್ಪೆಲಾ ಅತ್ಯುತ್ತಮ ಸಂಕಲನ: ಶಿವರಂಜನಿಯುಂ ಇನ್ನುಂ ಸಿಲಾ ಪೆಂಗಲ್ಲುಂ ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು ಅತ್ಯುತ್ತಮ ಚಿತ್ರಕಥೆ: ಸೂರರೈ ಪೊಟ್ರು ಅತ್ಯುತ್ತಮ ಸಂಭಾಷಣೆ ಲೇಖಕ: ಮಂಡೇಲಾ ಅತ್ಯುತ್ತಮ ಛಾಯಾಗ್ರಹಣ: ಅವಿಜಾತ್ರಿಕ್ (ದಿ ವಾಂಡರ್ಲಸ್ಟ್ ಆಫ್ ಅಪು) ಅತ್ಯುತ್ತಮ ಹಿನ್ನೆಲೆ ಗಾಯಕಿ: ನಂಚಮ್ಮ, ಎಕೆ ಅಯ್ಯಪ್ಪನಂ ಕೋಶಿಯುಮ್ ಅತ್ಯುತ್ತಮ ಹಿನ್ನೆಲೆ ಗಾಯಕ: ರಾಹುಲ್ ದೇಶಪಾಂಡೆ, ಮಿ ವಸಂತರಾವ್ ಪರಿಸರ ಸಂರಕ್ಷಣೆ ಕುರಿತ ಅತ್ಯುತ್ತಮ ಚಲನಚಿತ್ರ: ಮನಃ ಅರು ಮನುಹ್ (ಅಸ್ಸಾಂ) ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ: ಮಧ್ಯಪ್ರದೇಶನಾನ್-ಫೀಚರ್ ಚಲನಚಿತ್ರಗಳು ಅತ್ಯುತ್ತಮ ನಿರೂಪಣೆ: ರಾಪ್ಸೋಡಿ ಆಫ್ ರೈನ್ಸ್ – ಮಾನ್ಸೂನ್ಸ್ ಆಫ್ ಕೇರಳ ಅತ್ಯುತ್ತಮ ಸಂಕಲನ: ಬಾರ್ಡರ್‌ಲ್ಯಾಂಡ್ಸ್ ಅತ್ಯುತ್ತಮ ಆಡಿಯೋಗ್ರಫಿ: ಡೊಳ್ಳು ಅತ್ಯುತ್ತಮ ಆನ್-ಲೊಕೇಶನ್ ಸೌಂಡ್ ರೆಕಾರ್ಡಿಸ್ಟ್: ಮ್ಯಾಜಿಕಲ್ ಫಾರೆಸ್ಟ್ ಅತ್ಯುತ್ತಮ ಛಾಯಾಗ್ರಹಣ: ಶಬ್ದಿಕ್ಕುನ್ನ ಕಾಳಪ್ಪ ಅತ್ಯುತ್ತಮ ನಿರ್ದೇಶನ: ಓ ದಟ್ಸ್ ಭಾನು ಕೌಟುಂಬಿಕ ಮೌಲ್ಯಗಳ ಮೇಲಿನ ಅತ್ಯುತ್ತಮ ಚಿತ್ರ: ಕುಂಕುಮಾರ್ಚನ್ ಅತ್ಯುತ್ತಮ ಕಿರು ಕಾಲ್ಪನಿಕ ಚಿತ್ರ: ಕಚಿಚಿನಿತು ಅತ್ಯುತ್ತಮ ತನಿಖಾ ಚಿತ್ರ: ದಿ ಸೇವಿಯರ್: ಬ್ರಿಗ್. ಪ್ರೀತಮ್ ಸಿಂಗ್ ಅತ್ಯುತ್ತಮ ಪರಿಶೋಧನಾ ಚಿತ್ರ: ವೀಲಿಂಗ್ ದಿ ಬಾಲ್ ಅತ್ಯುತ್ತಮ ಶಿಕ್ಷಣ ಚಿತ್ರ: ಡ್ರೀಮಿಂಗ್ ಆಫ್ ವರ್ಡ್ಸ್ ಸಾಮಾಜಿಕ ಸಮಸ್ಯೆಗಳ ಮೇಲಿನ ಅತ್ಯುತ್ತಮ ಚಲನಚಿತ್ರ: ಜಸ್ಟೀಸ್ ಡಿಲೇಯ್ಡ್ ಬಟ್ ಡೆಲಿವರ್ಡ್ಡ್ ಅತ್ಯುತ್ತಮ ಪರಿಸರ ಚಿತ್ರ: ಮನಃ ಅರು ಮನುಹ್ ಅತ್ಯುತ್ತಮ ಪ್ರಚಾರ ಚಿತ್ರ: ಸರೌಂಟಿಂಗ್ ಚಾಲೆಂಜಸ್ ಅತ್ಯುತ್ತಮ ಕಲೆ ಮತ್ತು ಸಂಸ್ಕೃತಿ ಚಿತ್ರ: ನಾದದ ನವನೀತ ಡಿಆರ್ ಪಿಟಿ ವೆಂಕಟೇಶಕುಮಾರ್ ಅತ್ಯುತ್ತಮ ಜೀವನಚರಿತ್ರೆ ಚಿತ್ರ: ಪಬುಂಗ್ ಶ್ಯಾಮ್ಅತ್ಯುತ್ತಮ ಜನಾಂಗೀಯ ಚಿತ್ರ: ಮಂಡಲ್ ಕೆ ಬೋಲ್ ಅತ್ಯುತ್ತಮ ನಾನ್-ಫೀಚರ್ ಫಿಲ್ಮ್: ಟೆಸ್ಟಿಮನಿ ಆಫ್ ಅನಾ ನಿರ್ದೇಶಕರ ಅತ್ಯುತ್ತಮ ಚೊಚ್ಚಲ ನಾನ್-ಫೀಚರ್ ಚಿತ್ರ: ಪರಿಯಾ ಸಿನಿಮಾ ಕುರಿತ ಅತ್ಯುತ್ತಮ ಪುಸ್ತಕ: ದಿ ಲಾಂಗೆಸ್ಟ್ ಕಿಸ್