‘ಕಿಚ್ಚ 46’ ಸಿನಿಮಾದ ಟೀಸರ್ ಬಿಡುಗಡೆ! ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ‘ಕಿಚ್ಚ 46’ ಹೆಸರಿನ ಟೀಸರ್ ಭಾನುವಾರ ಬಿಡುಗಡೆಯಾಗಿದೆ. 46 ಶೀರ್ಷಿಕೆವುಳ್ಳ ಟೀಸರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸುದೀಪ್ ಟ್ವೀಟ್ ಮೂಲಕ ಇದನ್ನು ಹಂಚಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ‘ಕಿಚ್ಚ 46’ ಹೆಸರಿನ ಟೀಸರ್ ಭಾನುವಾರ ಬಿಡುಗಡೆಯಾಗಿದೆ. 46 ಶೀರ್ಷಿಕೆವುಳ್ಳ ಟೀಸರ್ ನ್ನು ಚಿತ್ರತಂಡ ಬಿಡುಗಡೆ ಮಾಡಿದ್ದು, ಸುದೀಪ್ ಟ್ವೀಟ್ ಮೂಲಕ ಇದನ್ನು ಹಂಚಿಕೊಂಡಿದ್ದಾರೆ. ಒಂದು ವರ್ಷದ ದೀರ್ಘ ಅವಧಿಯ ನಂತರ ಬರುತ್ತಿರುವ ನಟ ಸುದೀಪ್ ಅವರ ಹೊಸ ಸಿನಿಮಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಟೀಸರ್‌ನಲ್ಲಿ ಸುದೀಪ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕೊನೆಯಲ್ಲಿ ‘ನಾನು ಮನುಷ್ಯ ಅಲ್ಲ, ರಾಕ್ಷಸ’ ಎಂಬ ಸುದೀಪ್ ಸಂಭಾಷಣೆ ಇದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಟೀಸರ್ ಬಿಡುಗಡೆಯಾಗಿದೆ.ಕಲೈಪುಲಿ ಎಸ್. ತನು ಅವರು ಕಿಚ್ಚನ 46ನೇ ಸಿನಿಮಾ ನಿರ್ಮಾಣ ಮಾಡುತ್ತಿದ್ದು, ಕಿಚ್ಚ ಕ್ರಿಯೇಷನ್ಸ್‌ ಸಹ ನಿರ್ಮಾಣದ ಪಾಲು ಹೊಂದಿದೆ. ಇದು ವಿಜಯ್ ಕಾರ್ತಿಕೇಯನ್ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ.