ತಮಿಳು ಚಿತ್ರನಿರ್ದೇಶಕ ತ್ಯಾಗರಾಜನ್ ರಸ್ತೆ ಬದಿ ಶವವಾಗಿ ಪತ್ತೆ: ಕಾಡಿದ್ದ ಕಡುಬಡತನ ಮತ್ತು ಖಿನ್ನತೆ ತ್ಯಾಗರಾಜನ್ ಅವರು ಕಡು ಬಡತನ ಎದುರಿಸುತ್ತಿದ್ದರು. ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರಿಂದ ಅವರು ಖಿನ್ನರಾಗಿದ್ದರು ಎನ್ನಲಾಗಿದೆ. ಚೆನ್ನೈ: ಜನಪ್ರಿಯ ತಮಿಳು ಚಿತ್ರ ನಿರ್ದೇಶಕ ಎಂ.ತ್ಯಾಗರಾಜನ್ ಮೃತದೇಹ ಚೆನ್ನೈನ ರಸ್ತೆ ಬದಿ ಪತ್ತೆಯಾಗಿರುವ ದಾರುಣ ಘಟನೆ ನಡೆದಿದೆ. ಪ್ರಖ್ಯಾತ ಸಿನಿಮಾ ಸ್ಟುಡಿಯೊ ಎ.ವಿ.ಎಂ ಬಳಿ ಪತ್ತೆಯಾಗಿದೆ.ಇದನ್ನೂ ಓದಿ: 6 ದಶಕಗಳ ಕಾಲ ಕನ್ನಡಿಗರ ಮನೆ ಮಾತಾಗಿದ್ದ ಶಿವರಾಂ ನಡೆದು ಬಂದ ಹಾದಿ!ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದರೆಂದು ತಿಳಿದುಬಂದಿದೆ. ಮಾನಗರ ಕಾವಲ್, ವೆಟ್ರಿವೆಲ್ ವೆಟ್ರಿ ಮುಂತಾದ ಹಿಟ್ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು.ಇದನ್ನೂ ಓದಿ: ನಟ ಕಮಲ್ ಹಾಸನ್ ಕೋವಿಡ್-19 ನಿಂದ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್ ತ್ಯಾಗರಾಜನ್ ಅವರು ಕಡು ಬಡತನ ಎದುರಿಸುತ್ತಿದ್ದರು ಎನ್ನಲಾಗಿದೆ. ಅವರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರಿಂದ ಅವರು ಖಿನ್ನರಾಗಿದ್ದರು. ತಮಿಳುನಾಡು ನಿರ್ದೇಶಕರ ಸಂಘ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ.ಇದನ್ನೂ ಓದಿ: ಖ್ಯಾತ ಸಿನಿ ಗೀತರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನಿಧನ