ಅಡ್ವಾನ್ಸ್‌ ಬುಕ್ಕಿಂಗ್‌ನಲ್ಲೇ ಕೋಟಿ ರೂ. ಬಾಚಿ ಇತಿಹಾಸ ಸೃಷ್ಟಿಸಿದ ದರ್ಶನ್ ನಟನೆಯ ಕಾಟೇರ! ದರ್ಶನ್ ನಟನೆಯ ಕಾಟೇರ ಸಿನಿಮಾ ಡಿಸೆಂಬರ್‌ 29 ರಂದು ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12 ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ. ದರ್ಶನ್ ನಟನೆಯ ಕಾಟೇರ ಸಿನಿಮಾ ಡಿಸೆಂಬರ್‌ 29 ರಂದು ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಮಧ್ಯರಾತ್ರಿ 12 ಗಂಟೆಗೆ ಹಲವೆಡೆ ಕಾಟೇರ ಮೊದಲ ಶೋ ಆರಂಭವಾಗಲಿದೆ.ಈಗಾಗಲೇ ಅಡ್ವಾನ್ಸ್‌ ಬುಕಿಂಗ್‌ ಶುರುವಾಗಿದೆ. ವರ್ಷಾಂತ್ಯಕ್ಕೆ 'ಕಾಟೇರ' ಸಿನಿಮಾ ತೆರೆಗೆ ಬರುತ್ತಿದ್ದು, ತರುಣ್ ಕಿಶೋರ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ರಾಬರ್ಟ್ ನಂತರ ಎರಡನೇ ಬಾರಿಗೆ ಈ ಜೋಡಿ ಕೈ ಜೋಡಿಸಿದ್ದು, ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ.ದರ್ಶನ್ ತೂಗುದೀಪ ಅಭಿನಯದ 'ಕಾಟೇರ' ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್‌ಗೆ ಉತ್ತಮ ರೆಸ್ಪಾನ್ಸ್ ಬರುತ್ತಿದೆ. ವ್ಯವಸ್ಥೆಯ ವಿರುದ್ಧ ಹೋರಾಡುವ ನಾಯಕನಾಗಿ ಕಾಣಿಸಿಕೊಂಡಿರುವುದು ಟ್ರೈಲರ್‌ನಲ್ಲಿ ಕಾಣಿಸಿದೆ.ಇದನ್ನೂ ಓದಿ: ಕಾಟೇರ ಸಿನಿಮಾ ಡಿ.29ಕ್ಕೆ ಬಿಡುಗಡೆ: ಆರಾಧನಾ ಮೂಲಕ ಮತ್ತೆ ನಟಿಯಾಗುತ್ತಿದ್ದೇನೆ ಎಂದ ಮಾಲಾಶ್ರೀಇತಿಹಾಸದಲ್ಲಿ ಮೊದಲ ಬಾರಿಗೆ ಪ್ಯಾನ್ ಇಂಡಿಯಾ ಅಲ್ಲದ ಸಿನಿಮಾವೊಂದು ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಇಂತಹ ದಾಖಲೆ ಮಾಡಿದೆ. ಬರೋಬ್ಬರಿ ಒಂದು ಕೋಟಿ ರೂಪಾಯಿಯ ಕಲೆಕ್ಷನ್ ಮಾಡಿದೆ ಕಾಟೇರ ತಂಡ. ಈ ಬಗ್ಗೆ ಕಾಟೇರ ಅಫಿಶಿಯಲ್ ಸೋಶಿಯಲ್ ಮಿಡಿಯಾ ಹ್ಯಾಂಡಲ್‌ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. 1CR+ .#KaateraStormFromDec29 # # @@ @ ../MoYc1Ll9ioಒಂದು ಕೋಟಿಗೂ ಹೆಚ್ಚು ಹಣ ಕಲೆಕ್ಟ್ ಮಾಡಿರುವ ಕಾಟೇರ ತಂಡ ಇಲ್ಲಿಯವರೆಗೆ ಬರೋಬ್ಬರಿ 50 ಸಾವಿರಕ್ಕೂ ಹೆಚ್ಚು ಟಿಕೆಟ್ ಮಾರಾಟ ಮಾಡಿದೆ. ಈ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಮಧ್ಯರಾತ್ರಿಯೇ 'ಕಾಟೇರ'ನ ಅಬ್ಬರ ಜಾಸ್ತಿಯಾಗುತ್ತಿದ್ದು, ಈಗಾಗಲೇ ಬೆಳಗಿನ ಜಾವ 5 ಗಂಟೆ ಹಾಗೂ 10 ಗಂಟೆಯ ಶೋಗಳು ಕೆಲವೆಡೆ ಸೋಲ್ಡೌಟ್ ಆಗಿವೆ.