'ಕ್ಲಿಕ್' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ರವಿ ಬಸ್ರೂರು ಪುತ್ರ 'ಪವನ್' ಎಂಟ್ರಿ! ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಪುತ್ರ ಪವನ್ ಬಸ್ರೂರ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಪುತ್ರ ಪವನ್ ಬಸ್ರೂರ್ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ.ಶಶಿಕುಮಾರ್ ನಿರ್ದೇಶನದ ಕ್ಲಿಕ್ ಎಂಬ ಈ ಚಿತ್ರವು ಮಕ್ಕಳ ಚಲನಚಿತ್ರವಾಗಿದೆ. ಕಾರ್ತಿಕ್, ಸಿಲ್ಲಿ ಲಲ್ಲಿ ಆನಂದ್, ಚಂದ್ರಕಲಾ ಮೋಹನ್, ಸಂಜು ಬಸಯ್ಯ, ಸುಮನಾ, ರಚನಾ ದಶರತ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.16 ವರ್ಷದ ಪವನ್ ತನ್ನ ಜನ್ಮದಿನದ ಆಚರಣೆಯ ಸಂದರ್ಭದಲ್ಲಿ ಈ ಸಂಬಂಧ ಮಾಹಿತಿ ನೀಡಲಾಗಿದೆ. ತನ್ನ ತಂದೆ ರವಿ ಬಸ್ರೂರು ಪೋಸ್ಟ್ ಮಾಡಿದ ವೀಡಿಯೊಗಳ ಮೂಲಕ ಗಮನ ಸೆಳೆದ ಯುವ ಪ್ರತಿಭೆಯಯನ್ನು ನಿರ್ದೇಶಕರು ಸಿನಿಮಾಗೆ ಆಯ್ಕೆ ಮಾಡಿದ್ದಾರೆ.ಇದನ್ನೂ ಓದಿ: ರವಿ ಬಸ್ರೂರ್ ನಿರ್ದೇಶನದ 'ಕಡಲ್' ಸಿನಿಮಾ ಖಾಸಗಿ ಪ್ರದರ್ಶನಕ್ಕೆ ಸೀಮಿತ!‘ನಿಮ್ಮಲ್ಲಿರುವ ಪ್ರತಿಭೆ’ ಎಂಬ ಶೀರ್ಷಿಕೆಯನ್ನು ಹೊಂದಿರುವ ಕ್ಲಿಕ್, ಮನೆಯಲ್ಲಿ ನಿರ್ಲಕ್ಷ್ಯವನ್ನು ಎದುರಿಸುವ ಮಕ್ಕಳ ಮನಸ್ಥಿತಿ, ಅವರ ಶೈಕ್ಷಣಿಕ ಹೋರಾಟಗಳು ಮತ್ತು ಅದರಿಂದಾಗುವ ಅಭದ್ರತೆಗಳನ್ನು ಪರಿಶೋಧಿಸುವ ಕಥೆಯಾಗಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.ಶರಣ್ಯಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಶಶಿಕಿರಣ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ವಿಶ್ವಾಸ್ ಕೌಶಿಕ್ ಸಂಗೀತ ಸಂಯೋಜಿಸಿದ್ದು, ಆಕಾಶ್ ಪರ್ವ ಹಿನ್ನೆಲೆ ಸಂಗೀತವನ್ನು ನಿರ್ವಹಿಸಿದ್ದಾರೆ. ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ.