ಕೊರಗಜ್ಜನ ಆದಿಸ್ಥಳಕ್ಕೆ ಮಾಲಾಶ್ರೀ ಭೇಟಿ: ಈಡೇರಿದ ಬೇಡಿಕೆ; ಕನಸಿನ ರಾಣಿ ತೀರಿಸಿದ್ರು ಹರಕೆ! ಕುತ್ತಾರು ಕೊರಗಜ್ಜನ ಕಟ್ಟೆಗೆ ಭೇಟಿ ನೀಡುವ ಗಣ್ಯರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸೆಲೆಬ್ರಿಟಿಗಳು ಇಲ್ಲಿಗೆ ಬಂದು ಕೊರಗಜ್ಜನ ಆಶೀರ್ವಾದ ಪಡೆದು ಹೋಗುತ್ತಿದ್ದಾರೆ. ಈಗ ಸ್ಯಾಂಡಲ್ವುಡ್ ಖ್ಯಾತ ನಟಿ ಮಾಲಾಶ್ರೀ ಬಂದಿದ್ದಾರೆ. ಮಂಗಳೂರು: ಕುತ್ತಾರು ಕೊರಗಜ್ಜನ ಕಟ್ಟೆಗೆ ಭೇಟಿ ನೀಡುವ ಗಣ್ಯರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಸೆಲೆಬ್ರಿಟಿಗಳು ಇಲ್ಲಿಗೆ ಬಂದು ಕೊರಗಜ್ಜನ ಆಶೀರ್ವಾದ ಪಡೆದು ಹೋಗುತ್ತಿದ್ದಾರೆ. ಈಗ ಸ್ಯಾಂಡಲ್ವುಡ್ ಖ್ಯಾತ ನಟಿ ಮಾಲಾಶ್ರೀ ಬಂದಿದ್ದಾರೆ.ಬೇಡಿಕೆ ಈಡೇರಿಸಿದಕ್ಕೆ ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಸ್ಯಾಂಡಲ್ ವುಡ್ ಚಿತ್ರರಂಗದ ಕನಸಿನ ರಾಣಿ, ಖ್ಯಾತ ನಟಿ ಮಾಲಾಶ್ರೀ ಹಾಗೂ ಅವರ ಪುತ್ರಿ ರಾಧನಾ ಭೇಟಿ ನೀಡಿ ಹರಕೆ ತೀರಿಸಿದ್ದಾರೆ‌.ಈ ವೇಳೆ ಮಾತನಾಡಿದ ಮಾಲಾಶ್ರೀ ಅವರು ಮೂರು ತಿಂಗಳ ಹಿಂದಷ್ಟೇ ಕೊರಗಜ್ಜನ ಕಟ್ಟೆಗೆ ಬಂದು ಬೇಡಿಕೊಂಡಿದ್ದೆವು. ಎಲ್ಲವೂ ಅಂದುಕೊಂಡಂತೆ ನಡೆದು ಹೋಯಿತು. ಕ್ಷೇತ್ರದ ಶಕ್ತಿಯನ್ನು ಹೇಳತೀರದು. ಬಹಳಷ್ಟು ಪಾಸಿಟಿವ್ ಎನರ್ಜಿ ಕ್ಷೇತ್ರದಲ್ಲಿದೆ. ಒಳಗೆ ಹೋಗುವಾಗಲೇ ಸಾನಿಧ್ಯದ ಶಕ್ತಿ ಭಾಸವಾಗುತ್ತದೆ.ಇದನ್ನೂ ಓದಿ: ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ, ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆಬೇಡಿಕೆ ಈಡೇರಿದ ಹಾಗೆ ಹರಕೆ ತೀರಿಸಿ ಮತ್ತೆ ಆಶೀರ್ವಾದ ಪಡೆಯುವ ಉದ್ದೇಶದಿಂದ ಕುಟುಂಬ ಹಾಗೂ ಸ್ನೇಹಿತರ ಜೊತೆಗೆ ಬಂದಿದ್ದೇನೆ. ಮುಂದೆಯೂ ಬರುತ್ತೇನೆ ಎಂದರು. ಈ ಸಂದರ್ಭದಲ್ಲಿ ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಸಮಿತಿಯ ಟ್ರಸ್ಟಿಗಳು ನಟಿ ಮಾಲಾಶ್ರೀ ಹಾಗೂ ಪುತ್ರಿಯನ್ನು ಸನ್ಮಾನಿಸಿದರು.