ಇನ್ಮುಂದೆ ಕರಿಮಣಿ ಮಾಲೀಕ ನಾನಲ್ಲ: ಪತ್ನಿಗೆ ವಿಚ್ಛೇದನ ನೀಡಿದ ಬಗ್ಗೆ ಕಿರಿಕ್ ಕೀರ್ತಿ ಅಧಿಕೃತ ಮಾಹಿತಿ! ಪತ್ರಕರ್ತ, ನಿರೂಪಕ, ಬಿಗ್‌ಬಾಸ್‌ ಕನ್ನಡದ ಸ್ಪರ್ಧಿ, ಸಿನಿಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಿರಿಕ್‌ ಕೀರ್ತಿ, ತಮ್ಮ ದಾಂಪತ್ಯದ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಬೆಂಗಳೂರು: ಪತ್ರಕರ್ತ, ನಿರೂಪಕ, ಬಿಗ್‌ಬಾಸ್‌ ಕನ್ನಡದ ಸ್ಪರ್ಧಿ, ಸಿನಿಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಿರಿಕ್‌ ಕೀರ್ತಿ, ತಮ್ಮ ದಾಂಪತ್ಯದ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.ಪತ್ನಿ ಅರ್ಪಿತಾ ಜತೆಗೆ ವಿಚ್ಛೇದನ ಪಡೆದಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಈ ಹಿಂದೆಯೇ ಕಿರಿಕ್‌ ಕೀರ್ತಿ ಮತ್ತು ಅರ್ಪಿತಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಕೀರ್ತಿ ಬಂದಿದ್ದರಂತೆ. ಈಗ ಅಧಿಕೃತವಾಗಿ ಕಿರಿಕ್ ಕೀರ್ತಿ (ಕೀರ್ತಿ ಶಂಕರಘಟ್ಟ) ಅವರು ತಮ್ಮ ಪತ್ನಿ ಅರ್ಪಿತಾ ಅವರಿಗೆ ವಿಚ್ಛೇದನ ನೀಡಿದ್ದಾರೆ.ಇದನ್ನೂ ಓದಿ: ಕುಗ್ಗಿದ್ದೆ... ಎದ್ದು ಬಂದಿದೀನಿ.. ಈಗ ಡೋಂಟ್ ಕೇರ್ ಎಂದ ಕಿರಿಕ್ ಕೀರ್ತಿ! ಅಷ್ಟಕ್ಕೂ ಆಗಿದ್ದೇನು?ಈ ವಿಷಯವನ್ನು ಕೀರ್ತಿ ಅವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ‘ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜತೆಗಿನ ಪತಿ-ಪತ್ನಿ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ.. ಅಧಿಕೃತವಾಗಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ. ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ’ ಎಂದು ಕಿರಿಕ್ ಕೀರ್ತಿ ವಿಚ್ಛೇದನ ಆಗಿರುವುದನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.ಇದನ್ನೂ ಓದಿ: ಡೆತ್ ನೋಟ್ ಬರೆದಿಟ್ಟು ಜಗತ್ತಿಗೆ ವಿದಾಯ ಹೇಳಲು ನಿರ್ಧರಿಸಿದ್ದೆ; ಕಿರಿಕ್ ಕೀರ್ತಿ ಪೋಸ್ಟ್ ವೈರಲ್ಈ ಮೊದಲು ಕಿರಿಕ್ ಕೀರ್ತಿ ಹಾಗೂ ಅರ್ಪಿತಾ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಚರ್ಚಿಸಿದ್ದರು. ಈಗ ಈ ಬಗ್ಗೆ ಸ್ವತಃ ಕೀರ್ತಿ ಅಂತಿಮ ತೆರೆ ಎಳೆದಿದ್ದಾರೆ. 2016ರಲ್ಲಿ ಕನ್ನಡ ಬಿಗ್‌ಬಾಸ್ ಶೋನಲ್ಲಿ ಕಿರಿಕ್ ಕೀರ್ತಿ ಅವರು ರನ್ನರ್‌ಅಪ್ ಆಗಿ ಗಮನ ಸೆಳೆದಿದ್ದರು.