ಹೃದಯಾಘಾತದಿಂದ 37 ವರ್ಷದ ಮಲಯಾಳಂ ನಟ ನಿರ್ಮಲ್ ಬೆನ್ನಿ ಸಾವು! ನಿರ್ಮಲ್ ಬೆನ್ನಿ ತಮ್ಮ ವೃತ್ತಿಜೀವನವನ್ನು ಹಾಸ್ಯನಟನಾಗಿ ಪ್ರಾರಂಭಿಸಿದರು. ಯೂಟ್ಯೂಬ್ ವೀಡಿಯೊಗಳು ಮತ್ತು ವೇದಿಕೆ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಆಮೆನ್ ಚಿತ್ರದ ಮೂಲಕ ಸ್ಟಾರ್ ಎನಿಸಿಕೊಂಡಿದ್ದ ನಟ ನಿರ್ಮಲ್ ವಿ. ಬೆನ್ನಿ ಸಾವಿನ ಸುದ್ದಿ ಕೇಳಿ ಚಿತ್ರರಂಗದ ಅಭಿಮಾನಿಗಳು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ನಿರ್ಮಲ್ ಸಾವಿನ ಸುದ್ದಿಯನ್ನು ನಿರ್ಮಾಪಕ ಸಂಜಯ್ ಪತಿಯೂರ್ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟಿಸಿದ್ದಾರೆ.ಭಾರವಾದ ಹೃದಯದಿಂದ ಆತ್ಮೀಯ ಗೆಳೆಯನಿಗೆ ವಿದಾಯ. ಆಮೆನ್‌ನ ಕೊಚ್ಚಾನ್‌, ಮೈ 'ದೂರಂ' ಸಿನಿಮಾದಲ್ಲಿ ನಿರ್ಮಲ್‌ ಮುಖ್ಯ ಪಾತ್ರವಹಿಸಿದ್ದರು. ಇಂದು ಮುಂಜಾನೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ನನ್ನ ಆತ್ಮೀಯ ಗೆಳೆಯನ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಸರ್ವೇಶ್ವರನಲ್ಲಿ ಪ್ರಾರ್ಥಿಸುತ್ತೇನೆ.ಆತ್ಮೀಯ ಗೆಳೆಯನಿಗೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತಾ ಆಮೆನ್ ಚಿತ್ರದ ಬಹುತೇಕರು ಆತನ ಸಾವಿನ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಬೆನ್ನಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಇದರ ಬೆನ್ನಲ್ಲೆ ಸಾವಿನ ಸುದ್ದಿ ಬಂದಿದೆ.ನಿರ್ಮಲ್ ಬೆನ್ನಿ ತಮ್ಮ ವೃತ್ತಿಜೀವನವನ್ನು ಹಾಸ್ಯನಟನಾಗಿ ಪ್ರಾರಂಭಿಸಿದರು. ಯೂಟ್ಯೂಬ್ ವೀಡಿಯೊಗಳು ಮತ್ತು ವೇದಿಕೆ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಗಮನ ಸೆಳೆದರು. 2012ರಲ್ಲಿ ನವಗತರ್ಕ್ಕು ಸ್ವಾಗತಂ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ನಂತರ ಆಮೆನ್, ದರ್ಶ ಸೇರಿದಂತೆ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು.