ದಿಢೀರ್ ಅನಾರೋಗ್ಯ: ರಿಯಲ್ ಸ್ಟಾರ್ ಉಪೇಂದ್ರ ಆಸ್ಪತ್ರೆಗೆ ದಾಖಲು; ಡಿಸ್ಚಾರ್ಜ್ ಚಿತ್ರೀಕರಣದ ವೇಳೆ ದಿಢೀರ್ ಅಸ್ವಸ್ಥಗೊಂಡಿದ್ದರಿಂದ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಂಗಳೂರು: ಚಿತ್ರೀಕರಣದ ವೇಳೆ ದಿಢೀರ್ ಅಸ್ವಸ್ಥಗೊಂಡಿದ್ದರಿಂದ ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿತ್ರೀಕರಣದ ವೇಳೆ ಡಸ್ಟ್ ಅಲರ್ಜಿ ಆಗಿದ್ದರಿಂದ ಉಪೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಆರೋಗ್ಯ ತಪಾಸಣೆ ಮಾಡಲಾಯಿತು. ಇದನ್ನೂ ಓದಿ: ಶಿವರಾಜಕುಮಾರ್- ಉಪೇಂದ್ರ ಅಭಿನಯದ '45' ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ!ಆರೋಗ್ಯ ತಪಾಸಣೆ ಬಳಿಕ ಅವರು ತೆರಳಿದರು ಎಂದು ನೆಲಮಂಗಲ ಹರ್ಷ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದ್ದಾರೆ.ಆರೋಗ್ಯ ತಪಾಸಣೆ ಮಾಡಿಸಿಕೊಂಡ ಬಳಿಕ ಉಪೇಂದ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದ್ದು ಅಭಿಮಾನಿಗಳ ಆತಂಕ ನಿವಾರಣೆಯಾಗಿದೆ.