ಶಿವಣ್ಣನ ಜೊತೆ ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನೂತನ ಸಿನಿಮಾ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ರ ನೂತನ ಸಿನಿಮಾವೊಂದು ಸೆಟ್ಟೇರಿದ್ದು, ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನೂತನ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಬೆಂಗಳೂರು: ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ರ ನೂತನ ಸಿನಿಮಾವೊಂದು ಸೆಟ್ಟೇರಿದ್ದು, ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ನೂತನ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.ಹೌದು.. ‘ಸಪ್ತಸಾಗರದಾಚೆ ಎಲ್ಲೋ’ ಖ್ಯಾತಿಯ ಹೇಮಂತ್ ರಾವ್ ( ) ಮುಂದಿನ ಚಿತ್ರದ ಬಗ್ಗೆ ಅಪ್‌ಡೇಡ್ ಸಿಕ್ಕಿದ್ದು, ‘ಸಪ್ತಸಾಗರದಾಚೆ ಎಲ್ಲೋ’ ಮೂಲಕ ಪ್ರಿಯಾ-ಮನು ಕಥೆ ಹೇಳಿ ಗೆದ್ದಿದ್ದ ಹೇಮಂತ್ ರಾವ್ ಇದೀಗ ಶಿವರಾಜ್‌ಕುಮಾರ್ () ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: 'ಕ್ರೀಂ' ಮೂಲಕ ಮತ್ತೆ ತೆರೆ ಮೇಲೆ ಕಾಣಿಸಿಕೊಂಡ 'ಕಿರಿಕ್' ಬೆಡಗಿ ಸಂಯುಕ್ತ ಹೆಗಡೆಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ನೀಡಿದ್ದು, ಹೇಮಂತ್ ರಾವ್ ಅವರು ಶಿವಣ್ಣ ಮತ್ತು ಈ ಚಿತ್ರದ ನಿರ್ಮಾಪಕ ವೈಶಾಖ್ ಜೆ ಗೌಡ ಜೊತೆ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋ ಶೇರ್ ಮಾಡಿ ಸಿನಿಮಾ ಬಗ್ಗೆ ಅಧಿಕೃತ ಅಪ್‌ಡೇಟ್ ನೀಡಿದ್ದಾರೆ. ಶಿವಣ್ಣ ಜೊತೆ ಸಿನಿಮಾ ಮಾಡುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. 5th . . ; # @ @Vaishak_J_Films ../UZZNqf3Hbu‘ಗೋಧಿಬಣ್ಣ ಸಾಧಾರಣ ಮೈಕಟ್ಟು’, ಕವಲುದಾರಿ ಮತ್ತು ‘ಸಪ್ತಸಾಗರದಾಚೆ ಎಲ್ಲೋ’ ಮೂಲಕ ಖ್ಯಾತಿಗಳಿಸಿದ್ದ ನಿರ್ದೇಶಕ ಹೇಮಂತ್ ರಾವ್ ಅವರು ಶಿವಣ್ಣನಿಗೆ ಕಥೆ ಹೇಳಿದ್ದು, ಕಥೆ ಕೇಳಿದ ಶಿವಣ್ಣ ಕೂಡ ಥ್ರಿಲ್ ಆಗಿ ಕಥೆ ಓಕೆ ಮಾಡಿದ್ದಾರೆ ಎನ್ನಲಾಗಿದೆ. ಆ ಮೂಲಕ ಶಿವಣ್ಣ ಮತ್ತು ಹೇಮಂತ್ ರಾವ್ ಕಾಂಬೋದಲ್ಲಿ ಒಂದು ವಿಭಿನ್ನ ಸಿನಿಮಾ ಮೂಡಿ ಬರಲಿದೆ.ಇದನ್ನೂ ಓದಿ: ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಒಂದು ಸಂಗೀತ ರೊಮ್ಯಾಂಟಿಕ್ ಡ್ರಾಮಾ!ಅಂದಹಾಗೆ ‘ಜೈಲರ್’ ಸಕ್ಸಸ್ ನಂತರ ಶಿವಣ್ಣ ಮತ್ತಷ್ಟು ಬ್ಯುಸಿಯಾಗಿದ್ದು, ಭೈರತಿ ರಣಗಲ್, ಕರಟಕ ಧಮನಕ, ಘೋಸ್ಟ್ 2, ರಾಮ್ ಚರಣ್ ಜೊತೆಗಿನ ಹೊಸ ಸಿನಿಮಾದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ.