ರಾಗಿಣಿ ದ್ವಿವೇದಿ- ಶಂಕರ್ ಕೋನಮಾನಹಳ್ಳಿ ಅವರ ಮುಂದಿನ ಚಿತ್ರ 'ಬಿಂಗೋ'! ಡಿಸೆಂಬರ್ 16 ರಂದು ಬಿಡುಗಡೆಯಾಗಲಿರುವ ಟಶಂಭೋ ಶಿವ ಶಂಕರಟ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಿರ್ದೇಶಕ ಶಂಕರ್ ಕೋನಮನಹಳ್ಳಿ ಅವರ ಮುಂದಿನ ಚಿತ್ರಕ್ಕೆ ನಾಯಕ ನಟಿಯಾಗಿ ರಾಗಿಣಿ ದ್ವಿವೇದಿಯವರು ನಟಿಸುತ್ತಿದ್ದಾರೆ. ಡಿಸೆಂಬರ್ 16 ರಂದು ಬಿಡುಗಡೆಯಾಗಲಿರುವ ಟಶಂಭೋ ಶಿವ ಶಂಕರಟ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ನಿರ್ದೇಶಕ ಶಂಕರ್ ಕೋನಮಾನಹಳ್ಳಿ ಅವರ ಮುಂದಿನ ಚಿತ್ರಕ್ಕೆ ನಾಯಕ ನಟಿಯಾಗಿ ರಾಗಿಣಿ ದ್ವಿವೇದಿಯವರು ನಟಿಸುತ್ತಿದ್ದಾರೆ.ಸಸ್ಪೆನ್ಸ್ ಥ್ರಿಲ್ಲರ್ ಆಗಿರುವ ಈ ಚಿತ್ರಕ್ಕೆ ನಿರ್ಮಾಪಕರು ಬಿಂಗೊ ಎಂದು ಹೆಸರಿಟ್ಟಿದ್ದಾರೆ. ಭಾನುವಾರ ಅಧಿಕೃತವಾಗಿ ಚಿತ್ರಕ್ಕೆ ಚಾಲನೆ ನೀಡಲಾಗಿದೆ."ಬಿಂಗೊ ಶೀರ್ಷಿಕೆಯು ಅನೇಕ ಅರ್ಥಗಳನ್ನು ಹೊಂದಿದೆ. ಆದರೆ, ನಾವು ಇದರ ಅರ್ಥವನ್ನು ಪ್ರೇಕ್ಷಕರ ದೃಷ್ಟಿಕೋನಕ್ಕೆ ಬಿಡಲು ಬಯಸುತ್ತೇವೆ. ಕಥಾವಸ್ತುವಿನ ಬಗ್ಗೆ ಹೇಳುವುದಾದರೆ, ಬಿಂಗೊ ಮೈಂಡ್ ಗೇಮ್‌ ಆಧರಿಸಿದ ಚಿತ್ರವಾಗಿದೆ ಎಂದು ನಿರ್ದೇಶಕ ಶಂಕರ್ ಅವರು ಹೇಳಿದ್ದಾರೆ.ಇದನ್ನೂ ಓದಿ: 'ಸಾರಿ-ಕರ್ಮ ರಿಟರ್ನ್ಸ್' ರಾಗಿಣಿ ದ್ವಿವೇದಿಯ ಕಮ್ ಬ್ಯಾಕ್ ಚಿತ್ರ; ನಿರ್ದೇಶಕ ಬ್ರಹ್ಮಾನಂದ ರೆಡ್ಡಿಟಿವಿ ಧಾರಾವಾಹಿಗಳಿಂದ ಹಿರಿತೆರೆಗೆ ಆರ್ ಕೆ ಚಂದನ್ ಬಿಂಗೊ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದು, ಚಂದನ್ ಅವರಿಗೆ ರಾಗಿಣಿಗೆ ಜೋಡಿಯಾಗಲಿದ್ದಾರೆ.ಚಿತ್ರದಲ್ಲಿ ರಕ್ಷಾ ನಿಂಬರ್ಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಜೇಶ್ ನಟರಂಗ, ಪವನ್ (ಮಜಾ ಟಾಕೀಸ್), ಮುರಳಿ ಪೂರ್ವಿಕ್, ಅಪೂರ್ವ, ಆಶಾ ಸುಜಯ್, ಶ್ರವಣ್, ವಿದ್ಯಾ, ಕುಮಾರ್ ಮುಂತಾದ ಕಲಾವಿದರು 'ಬಿಂಗೊ' ಚಿತ್ರದಲ್ಲಿರುತ್ತಾರೆ.ಸಿನಿಮಾವನ್ನು ಪುನೀತ ಹಾಗೂ ಆರ್ ಪರಾಂಕುಶ್ ನಿರ್ಮಾಣ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶನವನ್ನು ಹಿತನ್ ಹಾಸನ್ ನೀಡುತ್ತಿದ್ದಾರೆ. ಛಾಯಾಗ್ರಹಣವನ್ನು ನಟರಾಜ್ ಮುದ್ದಾಲ್ ನಿಭಾಯಿಸಲಿದ್ದಾರೆ.