ನವೆಂಬರ್ ನಲ್ಲಿ 'ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ' ಬಿಡುಗಡೆ? ಇತ್ತೀಚೆಗಷ್ಟೇ ಬಿಡುಗಡೆಯಾದ ದಿಗಂತ್ ಮತ್ತು ಅನಂತ್ ನಾಗ್ ಅಭಿನಯದ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರವನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ದಿಗಂತ್ ಮತ್ತು ಅನಂತ್ ನಾಗ್ ಅಭಿನಯದ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರವನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ.ಚಿತ್ರ ನಿರ್ಮಾಪಕರು ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಈಗಾಗಲೇ ಸಿದ್ಧತೆ ನಡೆಸಿದ್ದು, ನಂತರ ಟ್ರೇಲರ್ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ನವೆಂಬರ್ ಎರಡನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ. ತಿಮ್ಮಯ್ಯ ಆಂಡ್ ತಿಮ್ಮಯ್ಯ 30 ವರ್ಷಗಳ ನಂತರ ಭೇಟಿಯಾಗುವ ಅಜ್ಜ ಮತ್ತು ಮೊಮ್ಮಗನ ಕಥೆಯಾಗಿದೆ. ಕೆಲ ಘಟನೆಗಳಿಂದಾಗಿ ತಾತ ಹಾಗೂ ಮೊಮ್ಮಗ ಒಂದು ಸೂರಿನಡಿ ಇರಲೇಬೇಕಾಗುತ್ತದೆ. ಒಂದೇ ಸೂರಿನಡಿ ಇರುವಾಗ ಇಬ್ಬರು ತಮ್ಮ ನಡುವಿನ ಕಾಣೆಯಾದ ಸಂಪರ್ಕವನ್ನು ಪುನಃ ಕಂಡುಕೊಳ್ಳುತ್ತಾರೆ. ಚಿತ್ರವು ಹಾಸ್ಯ ಪ್ರಧಾನವಾಗಿದ್ದು, ಕೌಟುಂಬಿ ಸಂಬಂಧಗಳ ಪ್ರಾಮುಖ್ಯತ ಬಗ್ಗೆಯೂ ಮಾತನಾಡುತ್ತದೆ ಎಂದು ನಿರ್ಮಾಪಕ ಸಂಜಯ್ ಶರ್ಮಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 'ಎಡಗೈಯೇ ಅಪಘಾತಕ್ಕೆ ಕಾರಣ' ಸಿನಿಮಾದಲ್ಲಿ 12 ವರ್ಷಗಳ ನಂತರ ಕಾಣಿಸಿಕೊಳ್ಳಲಿದ್ದಾರೆ ದಿಗಂತ ಮತ್ತು ನಿಧಿ ಸುಬ್ಬಯ್ಯ ಜೋಡಿಚಿತ್ರದಲ್ಲಿ ದಿಗಂತ್‌ ಅವರಿಗೆ ನಾಯಕಿಯಾಗಿ ನಟಿ ಐಂದ್ರಿತಾ ರೈ ಹಾಗು ನಟಿ ಶುಭ್ರಾ ಅಯ್ಯಪ್ಪ ನಟಿಸಿದ್ದಾರೆ. ಸಿದ್ಲಿಂಗು ಶ್ರೀಧರ್‌ ಮತ್ತು ದಿಲೀಪ್‌ ಬಿ. ಕುಮಾರ್‌ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಕೃಷ್ಣ ತೋಟ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರ ಕಥೆಯನ್ನು ಸಂಜಯ್‌ ಶರ್ಮಾ ಅವರೇ ಬರೆದಿದ್ದಾರೆ. ಸಂಜಯ್‌ ಸಹೋದರ ರಾಜೇಶ್‌ ಶರ್ಮಾ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.