ದರ್ಶನ್ ಪ್ರತಿಯೊಬ್ಬ ಕಲಾವಿದರಿಗೂ ಬೆಲೆ ಕೊಡುವ ಸ್ಟಾರ್: ಧರಮಣ್ಣ ಕಡೂರು ರಾಮಾ ರಾಮಾ ರೇ ಚಿತ್ರದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ಧರಮಣ್ಣ ಕಡೂರ್, ನಂತರ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ದರ್ಶನ್ ಜೊತೆ ಇನ್ಸ್ ಪೆಕ್ಟರ್ ವಿಕ್ರಮ್ ಮತ್ತು ರಾಬರ್ಟ್ ಚಿತ್ರಗಳಲ್ಲಿ ಅಭಿನಯಿಸಿರುವ.... ರಾಮಾ ರಾಮಾ ರೇ ಚಿತ್ರದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ ಧರಮಣ್ಣ ಕಡೂರ್, ನಂತರ ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ದರ್ಶನ್ ಜೊತೆ ಇನ್ಸ್ ಪೆಕ್ಟರ್ ವಿಕ್ರಮ್ ಮತ್ತು ರಾಬರ್ಟ್ ಚಿತ್ರಗಳಲ್ಲಿ ಅಭಿನಯಿಸಿರುವ ಧರಮಣ್ಣ, ಈಗ ಕ್ರಾಂತಿ ಚಿತ್ರದಲ್ಲಿ ಮತ್ತೆ ಚಾಲೆಂಜಿಂಗ್ ಸ್ಟಾರ್ ಜೊತೆಯಾಗಿದ್ದಾರೆ."ನಾನು ಮತ್ತೆ ಅವರ ಗರಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಕ್ರಾಂತಿಯಲ್ಲಿ, ನಾನು ಅವರ ಸ್ನೇಹಿತನಾಗಿ ನಟಿಸುತ್ತಿದ್ದೇನೆ ಮತ್ತು ಚಿತ್ರದುದ್ದಕ್ಕೂ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದೇನೆ. ದರ್ಶನ್ ಅವರೊಂದಿಗೆ ಕೆಲಸ ಮಾಡುವುದು ಸಂತೋಷದ ವಿಚಾರ" ಎಂದು ಧರಮಣ್ಣ ಹೇಳಿದ್ದಾರೆ.ಇದನ್ನು ಓದಿ: ವನ್ಯಜೀವಿ ಮಂಡಳಿಗೆ ಸದಸ್ಯರಾಗಿ ನಟ ದರ್ಶನ್, ಸಚಿವ ಮಾಧುಸ್ವಾಮಿ ನೇಮಕ!ದರ್ಶನ್ ಅವರ ಶ್ಲಾಘನೀಯ ಗುಣವೆಂದರೆ ಅವರ ಆಫ್‌ಸ್ಕ್ರೀನ್ ವ್ಯಕ್ತಿತ್ವ. ದರ್ಶನ್ ಪ್ರತಿಯೊಬ್ಬ ಕಲಾವಿದರಿಗೂ ಬೆಲೆ ಕೊಡುವ ಸ್ಟಾರ್. ಅವರು ತಮ್ಮ ಸ್ಟಾರ್ ಗಿರಿಯನ್ನು ಲೆಕ್ಕಿಸದೆ ಪ್ರತಿಯೊಬ್ಬ ಕಲಾವಿದರನ್ನು ಗಮನಿಸುತ್ತಾರೆ ಮತ್ತು ಅವರಿಗೆ ಸಮಾನ ಮನ್ನಣೆ ಸಿಗುವಂತೆ ಮಾಡುತ್ತಾರೆ. ಇತ್ತೀಚೆಗೆ ಹಿರಿಯೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅದು ನೇರವಾಗಿ ನನ್ನ ಅನುಭಕ್ಕೆ ಬಂತು. ವೇದಿಕೆಯ ಮೇಲೆ ನನ್ನ ಹೆಸರನ್ನು ಕರೆದು ಇಡೀ ಸಭೆಗೆ ನನ್ನನ್ನು ಪರಿಚಯಿಸಿದರು. ಕಾರ್ಯಕ್ರಮದ ನಂತರ ಅವರ ಅಭಿಮಾನಿಗಳು ನನಗೆ ಕರೆ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುಂದರವಾದ ಸಂದೇಶಗಳನ್ನು ಕಳುಹಿಸಿದರು. ಒಬ್ಬ ದೊಡ್ಡ ಸ್ಟಾರ್‌ನ ಈ ಒಂದು ಗೆಸ್ಚರ್ ನನ್ನಂತಹ ನಟನನ್ನು ನಿಜವಾಗಿಯೂ ಬಹಳ ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವುದು ಖಚಿತ." ಎಂದು ಧರಮಣ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕ್ರಾಂತಿ ಚಿತ್ರದ ಶೂಟಿಂಗ್ ಒಂದು ದೊಡ್ಡ ಅನುಭವ. ಚಿತ್ರದಲ್ಲಿ ದರ್ಶನ್ ಸರ್ ಗೆ ಸ್ನೇಹಿತನಾಗಿ ನಾನು ಕೂಡ ಒಂದು ಹಾಡಿನ ಭಾಗವಾಗಿದ್ದೇನೆ ಮತ್ತು ಫೈಟ್ ಸೀಕ್ವೆನ್ಸ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಕ್ರಾಂತಿ ಚಿತ್ರ ಪಕ್ಕಾ ಮಾಸ್ ಎಂಟರ್‌ಟೈನರ್ ಆಗಿದೆ ಎಂದು ಧರಮಣ್ಣ ಹೇಳಿದ್ದಾರೆ.