'ಉತ್ಸವ' ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲು ಅರುಣ್ ಸೂರ್ಯ ರೆಡಿ ಸ್ಯಾಂಡಲ್ ವುಡ್'ಗೆ ಹೊಸಬರ ಆಗಮನದಿಂದ ಹೊಸ ಅಲೆ ಎದ್ದಿದೆ. ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಕಥೆಗಳಿಂದ ಚಿತ್ರರಂಗಕ್ಕೆ ಹೊಸ ಮೆರಗು ಸಿಗುತ್ತಿದೆ. ಅಂಥದ್ದೇ‌ ಆವೇಗದಲ್ಲಿ ರೂಪಗೊಂಡಿರುವ ಹೊಸಬರ ಸಿನಿಮಾಗೆ ‘ಉತ್ಸವ’ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಯುವ ನಿರ್ದೇಶಕರ ಆಗಮನವಾಗುತ್ತಿದೆ. ಸ್ಯಾಂಡಲ್ ವುಡ್'ಗೆ ಹೊಸಬರ ಆಗಮನದಿಂದ ಹೊಸ ಅಲೆ ಎದ್ದಿದೆ. ಭಿನ್ನ-ವಿಭಿನ್ನ ಹಾಗೂ ಪ್ರಯೋಗಾತ್ಮಕ ಕಥೆಗಳಿಂದ ಚಿತ್ರರಂಗಕ್ಕೆ ಹೊಸ ಮೆರಗು ಸಿಗುತ್ತಿದೆ. ಅಂಥದ್ದೇ‌ ಆವೇಗದಲ್ಲಿ ರೂಪಗೊಂಡಿರುವ ಹೊಸಬರ ಸಿನಿಮಾಗೆ ‘ಉತ್ಸವ’ ಎಂಬ ಟೈಟಲ್ ಇಡಲಾಗಿದೆ. ಈ ಚಿತ್ರದ ಮೂಲಕ ಯುವ ನಿರ್ದೇಶಕರ ಆಗಮನವಾಗುತ್ತಿದೆ.ನಾಗೇಂದ್ರ ಅರಸ್ ಸೇರಿದಂತೆ ಹಲವು ನಿರ್ದೇಶಕ ಗರಡಿಯಲ್ಲಿ ಸಹಾಯಕ ಹಾಗೂ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವ ಅರುಣ್ ಸೂರ್ಯ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾದಲ್ಲಿ ಗಿಣಿರಾಮ ಸೀರಿಯಲ್ ಖ್ಯಾತಿಯ ರಿತ್ವಿಕ್ ಮಠದ್ ನಾಯಕನಾಗಿ ನಟಿಸಿದ್ದಾರೆ.ಇದನ್ನೂ ಓದಿ: ಸಂದೇಶಗಳು ವಾಟ್ಸಾಪ್ ಸ್ಟೇಟಸ್ ಹಾಕಲು ಮಾತ್ರ ಚಂದ, ಸಿನಿಮಾಗಳಿಗೆ ವರ್ಕೌಟ್ ಆಗೋಲ್ಲ: ಕಿರಣ್ ರಾಜ್ಫೇಸ್ ಟು ಪೇಸ್ ಚಿತ್ರದಲ್ಲಿ ನಟಿಸಿದ್ದ ಪೂರ್ವಿ ಜೋಶಿ ಚಿತ್ರದ ನಾಯಕಿ ನಟಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಚಿತ್ರದಲ್ಲಿ ನಾಗೇಂದ್ರ ಅರಸ್ ಮತ್ತು ಪ್ರಕಾಶ್ ತುಮ್ಮಿನಾಡ್ ಕೂಡ ನಟಿಸಿದ್ದಾರೆ.ಪ್ರೇಮಕಥಾ ಹಂದರ ಹೊಂದಿರುವ ಉತ್ಸವ ಸಿನಿಮಾವನ್ನು ಅರಸ ಪ್ರೊಡಕ್ಷನ್ ನಡಿ ಉಷಾ ಶ್ರೀನಿವಾಸ ನಿರ್ಮಾಣ ಮಾಡಿದ್ದಾರೆ.ಜಯಂತ್ ಕಾಯ್ಕಿಣಿ ಹಾಡುಗಳಿಗೆ ಎಮಿನಲ್ ಮಹಮ್ಮದ್ ಸಂಗೀತ ಒದಗಿಸಿದ್ದು, ಜಾವೀದ್ ಆಲಿ ಹಾಗೂ ಅಕಿಂತಾ ಕುಂಡು ಧ್ವನಿಯಾಗಿದ್ದಾರೆ. ಶಿವರಾಜ್ ಮೆಹೋ ಸಂಕಲನ, ಗೌತಮ್ ಮನು ಛಾಯಾಗ್ರಹಣ ಚಿತ್ರಕ್ಕಿದೆ. ಮನಾಲಿ ಹಾಗೂ ಗೋವಾದಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.