ವಿಜಯ್ ಕುಮಾರ್ ನಿರ್ದೇಶನದ 'ಮೈ ಹೀರೋ' ಸಿನಿಮಾದಲ್ಲಿ ಹಾಲಿವುಡ್ ಕಲಾವಿದ ಜಿಲಾಲಿ ರೆಜ್-ಕಲ್ಲಾ ಮೈ ಹೀರೋ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವ ಅವಿನಾಶ್ ವಿಜಯ್‌ಕುಮಾರ್, ಹಾಲಿವುಡ್ ಖ್ಯಾತ ನಟ ಜಿಲಾಲಿ ರೆಜ್-ಕಲ್ಲಾ ಅವರನ್ನು ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸುತ್ತಿದ್ದಾರೆ. ಮೈ ಹೀರೋ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರುವ ಅವಿನಾಶ್ ವಿಜಯ್‌ಕುಮಾರ್, ಹಾಲಿವುಡ್ ಖ್ಯಾತ ನಟ ಜಿಲಾಲಿ ರೆಜ್-ಕಲ್ಲಾ ಅವರನ್ನು ಕನ್ನಡ ಸಿನಿಮಾರಂಗಕ್ಕೆ ಪರಿಚಯಿಸುತ್ತಿದ್ದಾರೆ.ಚಿತ್ರದಲ್ಲಿ ಹಿರಿಯ ನಟರಾದ ಪ್ರಕಾಶ್ ಬೆಳವಾಡಿ ಮತ್ತು ದತ್ತಾತ್ರೇಯ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಜಿಲಾಲಿ ರೆಜ್-ಕಲ್ಲಾ ಅವರು ಹಾಲಿವುಡ್‌ನ ಹೆಸರಾಂತ ನಟರಾಗಿದ್ದು ಇದುವರೆಗೂ 15 ಚಿತ್ರಗಳ ಅಭಿನಯಿಸಿದ್ದಾರೆ. (ದಿ ಎಂಟಿಟಿ, ಬಿಲೀವ್, ಸಾಲ್ಟಿ ಡಿಶ್, ರಫಿಯನ್) ಮತ್ತು ಇಂಗ್ಲಿಷ್ ವೆಬ್ ಸರಣಿಯಲ್ಲಿ ಕೆಲಸ ಮಾಡಿದ್ದಾರೆ. ಅವರು ಈಗ ಮೈ ಹೀರೋ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ್ದಾರೆ, ಇದು ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.ಕಾಮಿಡಿ-ಡ್ರಾಮಾ ಎಂದು ಬಿಂಬಿಸಲಾದ ಈ ಸಿನಿಮಾದಲ್ಲಿ, ಡಿಜಿಲಾಲಿ ಒಂದು ಕಾರಣಕ್ಕಾಗಿ ಭಾರತಕ್ಕೆ ಬರುವ ಸೈನ್ಯದ ಅನುಭವಿ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ತುಳಿತಕ್ಕೊಳಗಾದ ಸಮುದಾಯದಿಂದ ಬಂದ ಹಾಗೂ ಅವನ ಮನೆಯಿಂದ ಬೇರ್ಪಟ್ಟ ಹುಡುಗನೊಂದಿಗೆ (ವೇದಿಕ್ ಕೌಶಲ್ ನಟಿಸಿದ) ಅವನ ಆಕಸ್ಮಿಕ ಪರಿಚಯವಾಗುತ್ತದೆ.ಅವನು ಈ ಹುಡುಗನನ್ನು ತನ್ನ ಕುಟುಂಬದೊಂದಿಗೆ ಹೇಗೆ ಮತ್ತೆ ಸೇರಿಸುತ್ತಾನೆ ಎಂಬುದೇ ಈ ಸಿನಿಮಾ ಕಥೆಯಾಗಿದೆ. ಇದು ಜಾತಿ ಮತ್ತು ವರ್ಣಭೇದ ನೀತಿಯ ಬಗ್ಗೆ ಕಥೆ ಹೇಳುತ್ತದೆ.ಅಜ್ಜ ಮತ್ತು ಮೊಮ್ಮಗನ ನಡುವಿನ ಸುಂದರವಾದ ಬಾಂಧವ್ಯವನ್ನು ಅನ್ವೇಷಿಸುತ್ತದೆ" ಎಂದು ಅವಿನಾಶ್ ಹೇಳುತ್ತಾರೆ.ಚಿತ್ರದ ಶೂಟಿಂಗ್ ಫೆಬ್ರವರಿ 24 ರಂದು ಚಿಕ್ಕಮಗಳೂರಿನಲ್ಲಿ ಪ್ರಾರಂಭವಾಗಲಿದ್ದು, ಎಪ್ಪತ್ತರಷ್ಟು ಚಿತ್ರೀಕರಣ ಮಧ್ಯಪ್ರದೇಶದಲ್ಲಿ ನಡೆಯಲಿದೆ, ನಂತರ ಕೆಲವು ಭಾಗಗಳನ್ನು ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಚಿತ್ರೀಕರಿಸಲಾಗುತ್ತದೆ. ಯುಎಸ್ ಎ ನಲ್ಲಿ ಕೆಲವು ಭಾಗಗಳನ್ನು ಶೂಟಿಂಗ್ ಮಾಡಲಾಗುವುದು ಎಂದಿದ್ದಾರೆ.ಕಂಪ್ಯೂಟರ್ ಸೈನ್ಸ್ ಪದವೀಧರರಾದ ಅವಿನಾಶ್ ಅವರು ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರು ಆದರೆ ಯಾವಾಗಲೂ ಸಿನಿಮಾದ ಬಗ್ಗೆ ಅತಿ ಹೆಚ್ಚು ಉತ್ಸಾಹವನ್ನು ಹೊಂದಿದ್ದರು. ಅವರು ಪ್ರೊಡಕ್ಷನ್ ಹೌಸ್ ಕೂಡ ನಡೆಸುತ್ತಿದ್ದಾರೆ ಮತ್ತು ಚಿಲಿಪಿಲಿ ಹಕ್ಕಿಗಳು ಸಂಸ್ಥೆ ಮೂಲಕ ಬಂಡವಾಳ ಹೂಡಿದ್ದಾರೆ.ನಾನು 18 ವರ್ಷ ವಯಸ್ಸಿನವನಾಗಿದ್ದಾಗ ನನ್ನ ಉತ್ಸಾಹ ಸಿನಿಮಾ ಬಗ್ಗೆ ಹೆಚ್ಚಿತು. ನಾನು ರಂಗಭೂಮಿ ಕಲಾವಿದನಾಗಿ ಪ್ರಾರಂಭಿಸಿ 5 ವರ್ಷಗಳ ಕಾಲ ಬಿ ಜಯಶ್ರೀ ಅವರ ಸ್ಪಂದನದಲ್ಲಿ ಕೆಲಸ ಮಾಡಿದ್ದೆ. ನಂತರ ನಾನು ಮುಂಬೈಗೆ ಹೋದೆ, ಅಲ್ಲಿ ಅವರು ರಂಗಭೂಮಿಯಲ್ಲಿ ತರಬೇತಿ ಪಡೆದೆ.ಅದೇ ಸಮಯದಲ್ಲಿ, ನಾನು ಮುಂಬೈನ ಅನುಪಮ್ ಖೇರ್ ಅವರ ನಟನಾ ಶಾಲೆಯಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋ ಫಿಲ್ಮ್ ಸ್ಕೂಲ್‌ನಲ್ಲಿ ನಿರ್ದೇಶನದ ಕೋರ್ಸ್ ಮಾಡಿದ್ದೇನೆ ಎಂದು ಅವಿನಾಶ್ ಹೇಳುತ್ತಾರೆ. ಮೈ ಹೀರೋ ಸಿನಿಮಾ ಒಂದೆರಡು ವರ್ಷಗಳ ಹಿಂದೆ ನಡೆಯಬೇಕಿತ್ತು ಆದರೆ ಕೋವಿಡ್‌ನಿಂದಾಗಿ ತಡವಾಯಿತು, ಆದರೆ ಅಂತಿಮವಾಗಿ ಟೇಕಾಫ್ ಆಗುತ್ತಿರುವುದು ನನಗೆ ಖುಷಿಯಾಗಿದೆ ಎಂದು ಅವಿನಾಶ್ ತಿಳಿಸಿದ್ದಾರೆ.