'ಜವಾನ್' ಸಂಗೀತ ನಿರ್ದೇಶಕ ಅನಿರುದ್ಧ್ ಜೊತೆ ಕೀರ್ತಿ ಸುರೇಶ್ ವಿವಾಹ: ನಟಿ ಹೇಳಿದ್ದೇನು? ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮತ್ತು ಜವಾನ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಪ್ರೀತಿಸುತ್ತಿದ್ದು, ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಮತ್ತು ಜವಾನ್ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಪ್ರೀತಿಸುತ್ತಿದ್ದು, ಮದುವೆಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.ಮಲಯಾಳಂ ಸಿನಿಮಾ ಮೂಲಕ ಬಾಲನಟಿಯಾಗಿ ನಟಿಸಲು ಆರಂಭಿಸಿದ ಕೀರ್ತಿ ಇಂದು ದಕ್ಷಿಣ ಭಾರತದ ಪ್ರಮುಖ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ. ನಿರ್ಮಾಪಕ ಜಿ ಸುರೇಶ್ ಕುಮಾರ್ ಹಾಗೂ ನಟಿ ಮೇನಕಾ ಅವರ ಪುತ್ರಿ ಕೀರ್ತಿ. ಅನಿರುದ್ಧ್ ಮತ್ತು ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಅನ್ನೋದು ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿರುವ ದೊಡ್ಡ ಗಾಸಿಪ್‌.ಇದೀಗ ಈ ಗಾಸಿಪ್ ಮತ್ತೆ ಮರುಕಳಿಸುತ್ತಿದೆ. ಜವಾನ್ ಚಿತ್ರದ ಮೂಲಕ ಅನಿರುದ್ಧ್ ಬಾಲಿವುಡ್ ನಲ್ಲಿ ಮಿಂಚುತ್ತಿರುವ ಹೊತ್ತಿನಲ್ಲಿ ಇವರಿಬ್ಬರ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: 'ದಸರಾ' ಸಿನಿಮಾ ಚಿತ್ರತಂಡದ 130 ಜನರಿಗೆ ಚಿನ್ನದ ನಾಣ್ಯ ಕೊಟ್ಟ ನಟಿ ಕೀರ್ತಿ ಸುರೇಶ್!ಆದರೆ ಇದೀಗ ಈ ವಿಚಾರವಾಗಿ ಕೀರ್ತಿ ಸುರೇಶ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ತಾನು ಮತ್ತು ಅನಿರುದ್ಧ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ನಿಜವಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ. ಅನಿರುದ್ಧ್ ತಮ್ಮ ಉತ್ತಮ ಸ್ನೇಹಿತ ಮಾತ್ರ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.ಮಾದ್ಯಮದವರು ಕೀರ್ತಿ ಅವರಿಗೆ ಮದುವೆ ಯಾವಾಗ ಎಂದು ಕೇಳಿದಾಗ, "ಯಾವಾಗ ಆಗಬೇಕೋ ಆವಾಗ ಆಗುತ್ತೆ" ಎಂದು ನಟಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಕೀರ್ತಿ ಅವರ ತಂದೆ ಸುರೇಶ್ ಕುಮಾರ್ ಕೂಡ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಕೀರ್ತಿ ಮತ್ತು ಅನಿರುದ್ಧ್ ಬಗ್ಗೆ ಬಂದಿರುವ ವರದಿಗಳು ಸಂಪೂರ್ಣ ನಿರಾಧಾರ ಎಂದು ಪ್ರತಿಕ್ರಿಯಿಸಿದ್ದರು.