ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್ ಫಾದರ್' ಸಿನಿಮಾದಲ್ಲಿ ಸಲ್ಮಾನ್ ಖಾನ್: ಫೆಬ್ರವರಿಯಲ್ಲಿ ಶೂಟಿಂಗ್ ಬಾಲಿವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸ್ಟಾರ್ ಹೀರೋ ಸಲ್ಮಾನ್ ಖಾನ್ ನೇರವಾಗಿ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಹಸಿರು ನಿಶಾನೆ ತೋರಿಸಿದ್ದಾರೆ. ಹೈದರಾಬಾದ್‌: ಬಾಲಿವುಡ್ ನಲ್ಲಿ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಸ್ಟಾರ್ ಹೀರೋ ಸಲ್ಮಾನ್ ಖಾನ್ ನೇರವಾಗಿ ತೆಲುಗು ಸಿನಿಮಾವೊಂದರಲ್ಲಿ ನಟಿಸಲು ಹಸಿರು ನಿಶಾನೆ ತೋರಿಸಿದ್ದಾರೆ.ಮೆಗಾಸ್ಟಾರ್ ಚಿರಂಜೀವಿ ನಾಯಕನಾಗಿ ಮೋಹನ್ ರಾಜಾ ನಿರ್ದೇಶನದಲ್ಲಿ ಮೂಡಿಬರಲಿರುವ ‘ಗಾಡ್ ಫಾದರ್’ ಚಿತ್ರದಲ್ಲಿ ಸಲ್ಮಾನ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಮೋಹನ್ ಲಾಲ್ ಅಭಿನಯದ ಮಲಯಾಳಂ ‘ಲೂಸಿಫರ್’ ಚಿತ್ರದ ರಿಮೇಕ್ ಆಗಿ ‘ಗಾಡ್ ಫಾದರ್’ ನಿರ್ಮಾಣಗೊಳ್ಳಲಿದೆ.ತೆಲುಗಿನ ‘ಲೂಸಿಫರ್’ ಚಿತ್ರದಲ್ಲಿ ಪೃಥ್ವಿರಾಜ್ ನಿರ್ವಹಿಸಿದ್ದ ಪ್ರಮುಖ ಪಾತ್ರವನ್ನು ಸಲ್ಮಾನ್ ನಿಭಾಯಿಸಲಿದ್ದಾರೆ. ‘ಫೈನಲ್’ ಪ್ರಮೋಷನ್ಸ್ ಭಾಗವಾಗಿ ಇತ್ತೀಚಿಗೆ ಹೈದರಾಬಾದ್ ಗೆ ಬಂದಿದ್ದ ಸಲ್ಮಾನ್‌ ಖಾನ್‌ ‘ಗಾಡ್ ಫಾದರ್’ ಚಿತ್ರದಲ್ಲಿ ನಟಿಸಲಿರುವುದಾಗಿ ಸ್ಪಷ್ಟಪಡಿಸಿದ್ದರು. ಫೆಬ್ರವರಿಯಲ್ಲಿ ಈ ಸಿನಿಮಾ ಶೂಟಿಂಗ್‌ ನಲ್ಲಿ ಸಲ್ಮಾನ್‌ ಪಾಲ್ಗೊಳ್ಳಲಿದ್ದಾರೆ.ಇಂದಿನ ಓದಿ: 'ಭೋಲ ಶಂಕರ್' ನಲ್ಲಿ ಮೆಗಾ ಸ್ಟಾರ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ!ಚಿರಂಜೀವಿ ಜೊತೆಗೆ ವಿಕ್ಟರಿ ವೆಂಕಟೇಶ್ ಅವರೊಂದಿಗೆ ಸಿನಿಮಾ ಮಾಡುವುದಾಗಿ ಸಲ್ಮಾನ್ ಖಾನ್ ಘೋಷಿಸಿದ್ದಾರೆ. ಆದರೆ, ಆ ಚಿತ್ರದ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ. ಸ್ನೇಹಕ್ಕೆ ಹೆಚ್ಚಿನ ಆದ್ಯತೆ ನೀಡುವ ಬಾಲಿವುಡ್ ಭಾಯಿಜಾನ್, ಲೆಕ್ಕವಿಲ್ಲದಷ್ಟು ಬಾರಿ ಇತರ ನಾಯಕರ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಅವರು ಪ್ರಸ್ತುತ ಬಾಲಿವುಡ್ ಬಾದ್‌ಶಾ ಶಾರುಖ್ ಅಭಿನಯದ ‘ಪಠಾಣ್’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಜೊತೆಗೆ ಮಿಸ್ಟರ್ ಪರ್ಫೆಕ್ಟ್ ‘ಅಮೀರ್ ಖಾನ್ ಅವರ ಹೊಸ ಚಿತ್ರ’ ಲಾಲ್ ಸಿಂಗ್ ಚಡ್ಡಾ’ ನಲ್ಲಿ ಕಾಣಿಸಿಕೊಂಡಿದ್ದಾರೆ.