ಟಾಲಿವುಡ್ ಹಿರಿಯ ನಟ ಚಲಪತಿ ರಾವ್ ವಿಧಿವಶ ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್ (78) ಅವರು ಶನಿವಾರ ತಡರಾತ್ರಿ ನಿಧನರಾಗಿದ್ದಾರೆ, ಹೈದರಾಬಾದ್: ತೆಲುಗು ಚಿತ್ರರಂಗದ ಹಿರಿಯ ನಟ ಚಲಪತಿ ರಾವ್ (78) ಅವರು ಶನಿವಾರ ತಡರಾತ್ರಿ ನಿಧನರಾಗಿದ್ದಾರೆ,ಹೃದಯಾಘಾತದಿಂದ ಬಂಜಾರ ಹಿಲ್ಸ್, ಎಂಎಲ್ಎ ಕಾಲೋನಿಯಲ್ಲಿರುವ ತಮ್ಮ ಪುತ್ರ ರವಿಬಾಬು ಅವರ ನಿವಾಸದಲ್ಲಿ ಚಲಪತಿ ರಾವ್ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ.ಚಲಪತಿ ರಾವ್ ಅವರ ಮಗ ರವಿಬಾಬು ಕೂಡ ತೆಲುಗು ಚಿತ್ರರಂಗದಲ್ಲಿ ನಟ, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ.ಇದನ್ನೂ ಓದಿ: ಶೂಟಿಂಗ್ ಸೆಟ್ ನಲ್ಲಿಯೇ ಕಿರುತೆರೆ ನಟಿ ತುನಿಷಾ ಶರ್ಮಾ ಆತ್ಮಹತ್ಯೆ!ಪೋಷಕ ನಟ ಮತ್ತು ಖಳನಟ ಪಾತ್ರಗಳಿಗೆ ಹೆಸರಾದ ಚಲಪತಿ ರಾವ್ ಅವರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.ತೆಲುಗು ಸ್ಟಾರ್‌ ನಟರಾದ ಎನ್‌ಟಿ ರಾಮರಾವ್, ಕೃಷ್ಣ, ಚಿರಂಜೀವಿ, ನಂದಮುರಿ ಬಾಲಕೃಷ್ಣ, ಪವನ್ ಕಲ್ಯಾಣ್, ವೆಂಕಟೇಶ್, ಅಕ್ಕಿನೇನಿ ನಾಗಾರ್ಜುನ, ಜ್ಯೂ. ಎನ್‌ಟಿಆರ್‌, ಮಹೇಶ್‌ ಬಾಬು ಅಭಿನಯಿಸಿದ್ದ ಹಲವು ಸೂಪರ್‌ ಹಿಟ್‌ ಚಿತ್ರಗಳಲ್ಲಿ ಚಲಪತಿ ರಾವ್ ಕಾಣಿಸಿಕೊಂಡಿದ್ದರು.ಚಲಪತಿ ರಾವ್ ಅವರ ನಿಧನಕ್ಕೆ ರಾಜಕೀಯ ಮುಖಂಡರು ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.