ರಾಮನಾಥ್ ನಿರ್ದೇಶನದ 'ಭೈರವ' ಚಿತ್ರಕ್ಕೆ ಸುಕನ್ಯಾ ಗಿರೀಶ್ ನಾಯಕಿ ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಟಿಸಿದ್ದ ಸುಕನ್ಯಾ ಗಿರೀಶ್ ತಮ್ಮ ಮುಂದಿನ ಸಿನಿಮಾಗೆ ಸಹಿ ಮಾಡಿದ್ದಾರೆ. ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಟಿಸಿದ್ದ ಸುಕನ್ಯಾ ಗಿರೀಶ್ ತಮ್ಮ ಮುಂದಿನ ಸಿನಿಮಾಗೆ ಸಹಿ ಮಾಡಿದ್ದಾರೆ. ಮೈಥಾಲಜಿ ಅಂಶಗಳನ್ನಿಟ್ಟುಕೊಂಡು ರಾಮತೇಜ ಸಿನಿಮಾ ನಿರ್ದೇಶಿಸಿದ್ದು, ಶಿವಾಜಿ ಸುರತ್ಕಲ್ ನಟ ಅಭಿನಯಿಸಿದ್ದಾರೆ.ಈ ಹಿಂದೆ ಸೈಕೋ, ಮತ್ತು ಸಾಲ್ಟ್ ಅಂಡ್ ಪೆಪ್ಪರ್‌ನಂತಹ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದ ನಿರ್ದೇಶಕರು ಭೈರವ ಚಿತ್ರದ ಮೂಲಕ ತಮ್ಮ ಚೊಚ್ಚಲ ಚಲನಚಿತ್ರವನ್ನು ಮಾಡಲಿದ್ದಾರೆ.ಹನಿ ಚೌಧರಿ ಮತ್ತು ವೈಭವ್ ಬಜಾಜ್ ಜಂಟಿಯಾಗಿ ನಿರ್ಮಿಸಲಾಗಿದ್ದು, ನಿರ್ದೇಶಕರು ನೇರ ಒಟಿಟಿ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಅದಕ್ಕಾಗಿ ಒಂದೆರಡು ಜನಪ್ರಿಯ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.ಚರಣ್ ಸುವರ್ಣ ಬರೆದಿರುವ ಭೈರವ ಚಿತ್ರಕ್ಕೆ ರಾಮತೇಜ ಅವರ ಚಿತ್ರಕಥೆ ಮತ್ತು ಸಂಭಾಷಣೆ ಇದೆ. ಚಿತ್ರದ ನಾಯಕನಾಗಿ ಕಮರೊಟ್ಟು ಚೆಕ್‌ಪೋಸ್ಟ್ ಖ್ಯಾತಿಯ ಸನತ್ ಅವರನ್ನು ನಿರ್ಮಾಪಕರು ಆಯ್ಕೆ ಮಾಡಿದ್ದಾರೆ ಮತ್ತು ಉಮೇಶ್ ಸಕ್ರೆನಾಡು ಅವರು ಖಳನಾಯಕರಾಗಿ ನಟಿಸಲಿದ್ದಾರೆ.ಇದನ್ನೂ ಓದಿ: 'ಬಡವ ರಾಸ್ಕಲ್' ಸ್ನೇಹಿತರೇ ನಿರ್ಮಿಸಿದ ಪಕ್ಕಾ ಲೋಕಲ್ ಸಿನಿಮಾ: ಕೊರಿಯರ್ ಬಾಯ್ ನಿಂದ ನಿರ್ದೇಶಕ ಹುದ್ದೆಗೇರಿದ ಶಂಕರ್ ಗುರುಒಳ್ಳೆಯದು ಮತ್ತು ಕೆಟ್ಟದ್ದು ಎರಡು ಕುರಿತ ಕಮರ್ಷಿಯಲ್ ಸಿನಿಮಾಾ ಇದಾಗಿದೆ. ಜನವರಿ 28 ರಂದು ಪೋಸ್ಟರ್ ರಿಲೀಸ್ ಆಗಲಿದೆ. ಸಂಕ್ರಾಂತಿಯಿಂದ ಶೂಟಿಂಗ್ ಆರಂಭಿಸುವುದಾಗಿ ನಿರ್ದೇಶಕ ರಾಮತೇಜಾ ಹೇಳಿದ್ದಾರೆ. ನಾವು ಬೆಂಗಳೂರು, ಋಷಿಕೇಶ, ಕಾಶಿ, ಮೀರತ್ ಮತ್ತು ಗಾಜಿಯಾಬಾದ್‌ನಲ್ಲಿ ಶೂಟಿಂಗ್ ನಡೆಸುತ್ತೇವೆ ಎಂದು ಹೇಳಿದ್ದಾರೆ.