ಮುಮ್ಮಟ್ಟಿ ಅಭಿನಯದ ಮುಂದಿನ ಸಿನಿಮಾದಲ್ಲಿ ಕನ್ನಡ ನಟ ಆರ್ಯನ್ ಸಂತೋಷ್ ನಟನೆ! ಇತ್ತೀಚೆಗೆ ಮಲಯಾಳಂನಲ್ಲಿ ದಿಲೀಪ್ ಅಭಿನಯದ ಬಾಂದ್ರಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಕನ್ನಡ ನಟ ಆರ್ಯನ್ ಸಂತೋಷ್, ಹಿರಿಯ ನಟ ಮಮ್ಮುಟ್ಟಿ ಅವರ ಮುಂದಿನ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಮಲಯಾಳಂನಲ್ಲಿ ದಿಲೀಪ್ ಅಭಿನಯದ ಬಾಂದ್ರಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಕನ್ನಡ ನಟ ಆರ್ಯನ್ ಸಂತೋಷ್, ಹಿರಿಯ ನಟ ಮಮ್ಮುಟ್ಟಿ ಅವರ ಮುಂದಿನ ಚಿತ್ರಕ್ಕಾಗಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಆದರೆ ಈ ಸಂಬಂಧ ಇದುವರೆಗೂ ನಟ ಅರ್ಯನ್ ಸಂತೋಷ್ ಎಲ್ಲಿಯೂ ವಿವರಗಳ ಬಗ್ಗೆ ಮಾಹಿತಿ ನೀಡಿಲ್ಲ. ಬಾಂದ್ರಾದಲ್ಲಿ, ಆರ್ಯನ್ ಸಂಜಯ್ ಭಟ್ ಎಂಬ ಉತ್ತರ ಭಾರತದ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.ಇದನ್ನೂ ಓದಿ: ಕಾರ್ಕಳದ ಕಣಂಜಾರು ಗ್ರಾಮದಲ್ಲಿ ನಡೆಯುವ ಕಥೆಗಳನ್ನು ಹೊತ್ತು ತಂದ ಥ್ರಿಲ್ಲರ್ ಕಣಂಜಾರು!ಈ ಚಿತ್ರವು ಮಲಯಾಳಂ ಮತ್ತು ಕನ್ನಡದಲ್ಲಿ ಅವರಿಗೆ ಮತ್ತಷ್ಟು ಹೆಚ್ಚಿನ ಅವಕಾಶಗಳಿಗೆ ಬಾಗಿಲು ತೆರೆಯುತ್ತದೆ ಎಂದು ನಂಬಿದ್ದಾರೆ. ಅವರ ಮುಂದಿನ ಕನ್ನಡ ಪ್ರಾಜೆಕ್ಟ್, ಭವಾನಿ ಫೈಲ್ಸ್ ಸಿನಿಮಾಗೆ ಅವರು ಚಿತ್ರಕಥೆ ಬರೆದಿದ್ದಾರೆ, ಇದನ್ನು ಮಲಯಾಳಂನಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ಧವಾಗಿದೆ.