'ಈಗಷ್ಟೇ ದೇವರನ್ನು ಭೇಟಿ ಮಾಡಿದೆ': ಹಾಲಿವುಡ್ ಹಿರಿಯ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಭೇಟಿ ಮಾಡಿದ ಎಸ್ ಎಸ್ ರಾಜಮೌಳಿ ಬಾಹುಬಲಿ, ಆರ್ ಆರ್ ಆರ್ ಖ್ಯಾತಿಯ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಅಮೆರಿಕದಲ್ಲಿ ಹಾಲಿವುಡ್‌ನ ಹಿರಿಯ ಚಿತ್ರ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದಾರೆ. ಬಾಹುಬಲಿ, ಆರ್ ಆರ್ ಆರ್ ಖ್ಯಾತಿಯ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ಅಮೆರಿಕದಲ್ಲಿ ಹಾಲಿವುಡ್‌ನ ಹಿರಿಯ ಚಿತ್ರ ನಿರ್ದೇಶಕ ಸ್ಟೀವನ್ ಸ್ಪೀಲ್‌ಬರ್ಗ್ ಅವರನ್ನು ಭೇಟಿಯಾಗಿದ್ದಾರೆ. ಈ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿರುವ ಅವರು, ನಾನು ದೇವರನ್ನು ಭೇಟಿಯಾದೆ ಎಂದು ಬರೆದುಕೊಂಡಿದ್ದಾರೆ. ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಚಿತ್ರದಲ್ಲಿ ರಾಜಮೌಳಿ ಮತ್ತು ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ಸ್ಪೀಲ್‌ಬರ್ಗ್ ಅವರೊಂದಿಗೆ ಸಂತೋಷದಿಂದ ಪೋಸ್ ಕೊಡುತ್ತಿರುವುದನ್ನು ಕಾಣಬಹುದು. ../NYsNgbS8Fwಈ ವರ್ಷದ ಗೋಲ್ಡನ್ ಗ್ಲೋಬ್ಸ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೆಲ ದಿನಗಳ ಹಿಂದಷ್ಟೇ ಆರ್ ಆರ್ ಆರ್ ಚಿತ್ರದ ನಾಟು ನಾಟು ಗೀತೆಗೆ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿ ಬಂದಿತ್ತು. 80 ದಿನ ಜಪಾನ್ ನ ಥಿಯೇಟರ್ ನಲ್ಲಿ ತೆರೆಕಂಡ ಚಿತ್ರ 31.45 ಕೋಟಿ ರೂಪಾಯಿ ಗಳಿಸಿದೆ.ಇದನ್ನೂ ಓದಿ: 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ; ಮಾತೇ ಬರುತಿಲ್ಲ, ಸಂಗೀತಕ್ಕೆ ಗಡಿಯಿಲ್ಲ ಎಂದ ರಾಜಮೌಳಿಎನ್‌ಟಿಆರ್ ಜೂನಿಯರ್ ಮತ್ತು ರಾಮ್ ಚರಣ್ ನಟಿಸಿದ ಈ ಚಿತ್ರವು ಭಾರತದಲ್ಲಿ ಅದ್ಭುತವಾದ ಬಾಕ್ಸ್ ಆಫೀಸ್ ಯಶಸ್ಸು ಕಂಡು ವಿದೇಶದಲ್ಲಿ ಕೂಡ ಜನಪ್ರಿಯವಾಗಿದೆ. ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿಯ ಕಿರುಪಟ್ಟಿಗೆ ಸೇರಿದೆ. ಈಗ ಚಿತ್ರಪ್ರೇಮಿಗಳ ಚಿತ್ತ ಆಸ್ಕರ್ ನಾಮನಿರ್ದೇಶನಗಳ ಮೇಲೆ ನೆಟ್ಟಿದ್ದು, ಜನವರಿ 24 ರಂದು ಘೋಷಣೆಯಾಗಲಿದೆ.