ಮೂರೇ ದಿನದಲ್ಲಿ 'ಕಲ್ಕಿ' ಬರೋಬ್ಬರಿ 415 ಕೋಟಿ ರೂ. ಕಲೆಕ್ಷನ್ ಕಲ್ಕಿ ಚಿತ್ರ ಗುರುವಾರ ಆರು ಭಾಷೆಗಳಲ್ಲಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಬಿಡುಗಡೆಯಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ಸ್ ಮಾಡಿದ್ದು, ಬಿಡುಗಡೆಯಾದ ಮೂರೇ ದಿನದಲ್ಲಿ ಬರೋಬ್ಬರಿ 415 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.ಹಿಂದೂ ಮಹಾಕಾವ್ಯ ಮಹಾಭಾರತ ಮತ್ತು ವೈಜ್ಞಾನಿಕ ಕಾಲ್ಪನಿಕ ಕಥೆಯನ್ನಿಟ್ಟುಕೊಂಡ ಅದ್ಭುತ ಗ್ರಾಫಿಕ್ಸ್‌, ಸಾಹಸ ದೃಶ್ಯಗಳು ಪ್ರೇಕ್ಷಕರನ್ನು ಮೋಡಿ ಮಾಡಿವೆ.ವೈಜಯಂತಿ ಮೂವೀಸ್ ನಿರ್ಮಿಸಿದ 600 ಕೋಟಿ ರೂ. ದೊಡ್ಡ ಬಜೆಟ್ ನ ಈ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿ ಸ್ಟಾರ್ ಕಲಾವಿದರ ದಂಡೇ ಇದೆ. ಇದರ ಜೊತೆಗೆ ಅನೇಕ ಸೆಲೆಬ್ರಿಟಿಗಳು ಅತಿಥಿ ಪಾತ್ರ ಮಾಡಿದ್ದಾರೆ.ಕಲ್ಕಿ ಚಿತ್ರ ಗುರುವಾರ ಆರು ಭಾಷೆಗಳಲ್ಲಿ, ತೆಲುಗು, ತಮಿಳು, ಮಲಯಾಳಂ, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಬಿಡುಗಡೆಯಾಗಿದೆ.ವೈಜಯಂತಿ ಮೂವೀಸ್ ತನ್ನ ಅಧಿಕೃತ ಪುಟದಲ್ಲಿ ಚಿತ್ರದ ಮೂರು ದಿನದ ಗಳಿಕೆಯನ್ನು ಹಂಚಿಕೊಂಡಿದ್ದು, ಕಲ್ಕಿ 2898 ಫೋರ್ಸ್ ತಡೆಯಲಾಗದು, ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ಸ್()ನಲ್ಲಿ 415 ಕೋಟಿ ರೂ. ಗಳಿಸಿದೆ ಎಂದು ಪೋಸ್ಟ್ ಮಾಡಿದೆ.ಕಲ್ಕಿ 2898 ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆದಿದ್ದು, ಬಿಡುಗಡೆಯಾದ ಮೊದಲ ದಿನವೇ 191.5 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ಶುಕ್ರವಾರ ತಿಳಿಸಿದ್ದಾರೆ.ಕಲ್ಕಿ 2898 ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 191.5 ಕೋಟಿ ರೂಪಾಯಿ ಗಳಿಸಿತ್ತು. ಕಲ್ಚಿ ಚಿತ್ರ ಮೊದಲ ದಿನದ ಗಳಿಕೆಯಲ್ಲಿ ಬಾಹುಬಲಿ, ಆರ್‌ಆರ್‌ಆರ್‌ ಸಿನಿಮಾಗಳ ಬಳಿಕ ಉತ್ತಮ ಆರಂಭ ಪಡೆದ ಮೂರನೇ ಭಾರತೀಯ ಸಿನಿಮಾವೆಂಬ ಖ್ಯಾತಿಗೆ ಪಾತ್ರವಾಗಿದೆ.