14 ವರ್ಷಗಳ ನಂತರ ಜಾಕಿ ಚಿತ್ರ ಮರು ಬಿಡುಗಡೆ; ಪುನೀತ್ ಅಭಿಮಾನಿಗಳಿಂದ ಸಂಭ್ರಮಾಚರಣೆ 2010ರಲ್ಲಿ ತೆರೆಕಂಡಿದ್ದ ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾ ಬೆಂಗಳೂರು: ವರನಟ ಡಾ ರಾಜ್ ಕುಮಾರ್ ಅವರ ತೃತೀಯ ಪುತ್ರ ಅಭಿಮಾನಿಗಳ ಪಾಲಿನ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿಧನರಾಗಿ ಎರಡೂವರೆ ವರ್ಷವಾಗುತ್ತಿದೆ. ಇದೇ ಮಾರ್ಚ್ 17ರಂದು ಅವರ ಹುಟ್ಟುಹಬ್ಬ. ಪುನೀತ್ ನಿಧನ ನಂತರ ಅವರ ನಟನೆ, ಚಿತ್ರಗಳು, ಮಾತುಗಳು, ಸಾಮಾಜಿಕ ಕೆಲಸ-ಕಾರ್ಯಗಳು ಇಲ್ಲದೆ ಅವರ ಕುಟುಂಬಸ್ಥರು, ಅಭಿಮಾನಿಗಳು, ಒಟ್ಟಾರೆಯಾಗಿ ಕನ್ನಡ ಜನತೆಗೆ ಕಳೆದುಕೊಂಡ ಭಾವ ಕಾಡುತ್ತಿದೆ.ಆದರೂ ಅವರ ನೆನಪನ್ನು ಜೀವಂತವಾಗಿಡಲು ಈ ಬಾರಿಯ ಹುಟ್ಟುಹಬ್ಬ ಸಂದರ್ಭದಲ್ಲಿ 14 ವರ್ಷಗಳ ಹಿಂದೆ ನಟಿಸಿ ಬಿಡುಗಡೆಯಾಗಿ ಯಶಸ್ಸು ಕಂಡಿದ್ದ ಪುನೀತ್ ನಟನೆಯ, ಸೂರಿ ನಿರ್ದೇಶನದ ‘ಜಾಕಿ’ ಸಿನಿಮಾ ಇಂದು ಮಾರ್ಚ್ 15ರಂದು ರಿರೀಲಿಸ್ ಆಗಿದೆ. ‘ಜಾಕಿ’ 14 ವರ್ಷದ ಹಿಂದೆ ತೆರೆಕಂಡಿದ್ದ ಚಿತ್ರವಾಗಿದೆ. ಈ ಸಿನಿಮಾ ಒಳ್ಳೆಯ ಗಳಿಕೆ ಕಂಡಿತ್ತು. ಪುನೀತ್ ವಿಭಿನ್ನ ರೀತಿ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು.ಅಪ್ಪು ಅಭಿಮಾನಿಗಳು ಅಕ್ಷರಶಃ ಸಂಭ್ರಮದಲ್ಲಿ ಇಂದು ಮಿಂದೆದ್ದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ಕಂಡು ಹೊಸ ಚಿತ್ರ ಬಿಡುಗಡೆಯಾದಷ್ಟೇ ಸಂಭ್ರಮಪಟ್ಟಿದ್ದಾರೆ. ../S73uPfJBByJackie ! 🎉 ' #' ! @🍿 # # @KRG_Studios ../eNa7ee8Xmgಅಪ್ಪು ಅಭಿಮಾನಿಗಳು ಅದ್ದೂರಿಯಾಗಿ ಈ ಚಿತ್ರವನ್ನು ಸ್ವಾಗತಿಸಿದ್ದಾರೆ. ಬೆಳ್ಳಂಬೆಳಗ್ಗೆಯೇ ಪಟಾಕಿ ಹಚ್ಚಿ, ಕೇಕ್ ಕತ್ತರಿಸಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಮುಂಜಾನೆಯೇ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ರಾಜ್ಯಾದ್ಯಂತ 150ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ತೆರೆಕಂಡಿದೆ.ಅಪ್ಪು ಅಭಿಮಾನಿಗಳು ಅಕ್ಷರಶಃ ಸಂಭ್ರಮದಲ್ಲಿ ಇಂದು ಮಿಂದೆದ್ದಿದ್ದಾರೆ. ತಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆ ಮೇಲೆ ಕಂಡು ಹೊಸ ಚಿತ್ರ ಬಿಡುಗಡೆಯಾದಷ್ಟೇ ಸಂಭ್ರಮಪಟ್ಟಿದ್ದಾರೆ.