ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತ! ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಹುತೇಕ 'ಕಾಟೇರಾ' ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದಂತೆ, ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಬಹುತೇಕ 'ಕಾಟೇರಾ' ಚಿತ್ರೀಕರಣ ಪೂರ್ಣಗೊಳಿಸುತ್ತಿದ್ದಂತೆ, ಮತ್ತೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ.'ಮಿಲನ' ಖ್ಯಾತಿಯ ನಿರ್ದೇಶಕ ಪ್ರಕಾಶ್ ಅವರೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ ಸದ್ದಿಲ್ಲದೆ ಅವರ ಹೊಸ ಸಿನಿಮಾದ ಮುಹೂರ್ತ ನರೆವೇರಿದೆ. ಇಂದು ಬೆಂಗಳೂರಿನ ದೊಡ್ಡ ಮಹಾ ಗಣಪತಿ ದೇವಸ್ಥಾನದಲ್ಲಿ ಸದ್ದಿಲ್ಲದೇ ಹೊಸ ಸಿನಿಮಾದ ಮುಹೂರ್ತ ನಡೆದಿದೆ. ಇದನ್ನೂ ಓದಿ: ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾಗೆ ಯು/ಎ ಪ್ರಮಾಣ ಪತ್ರ; ನವೆಂಬರ್ 10 ರಂದು ತೆರೆಗೆ!ಪ್ರಕಾಶ್- ದರ್ಶನ್ ಕಾಂಬಿನೇಶ್ ನಲ್ಲಿ ಸಿನಿಮಾ ಬರಲಿದೆ ಎನ್ನುವ ಸುದ್ದಿ ಹಲವು ತಿಂಗಳಿಂದ ಹರಿದಾಡುತ್ತಿತ್ತು. ಅದೀಗ ಈ ಸುದ್ದಿ ನಿಜವಾಗಿದೆ. ವೈಷ್ಣೋ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿರುವ ಚಿತ್ರಕ್ಕೆ ತಾತ್ಕಾಲಿಕವಾಗಿ ʼಡಿ-57ʼ ಎಂದು ಹೆಸರಿನ್ನಿಡಲಾಗಿದೆ.ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಒಚ್ಚಾರೇ ತಾರಕ್ ನಟ-ನಿರ್ದೇಶಕ ಜೋಡಿಯಿಂದ ಮತ್ತೊಂದು ಮಾಸ್ ಎಂಟರ್‌ಟೈನರ್‌ ಸಿನಿಮಾಕ್ಕೆ ಸಿದ್ದತೆ ನಡೆದಿದೆ. @ #, , # #D57 @. , … ../