'ಒಡೆಲಾ ರೈಲ್ವೆ ಸ್ಟೇಷನ್' ಸೀಕ್ವೆಲ್; ವಸಿಷ್ಠ ಸಿಂಹ ಜೊತೆ ಪ್ರಮುಖ ಪಾತ್ರದಲ್ಲಿ ತಮನ್ನಾ ಭಾಟಿಯಾ 2021ರ ಸೀಟಿಮಾರ್ ಚಲನಚಿತ್ರವನ್ನು ಕೊನೆಯ ಬಾರಿಗೆ ನಿರ್ದೇಶಿಸಿದ್ದ ಬರಹಗಾರ- ನಿರ್ದೇಶಕ ಸಂಪತ್ ನಂದಿ ಅವರು ಈಗ ತಮ್ಮ ಮುಂದಿನ ಚಿತ್ರ 'ಒಡೆಲಾ 2'ದೊಂದಿಗೆ ಬರಹಗಾರರಾಗಿ ಬರುತ್ತಿದ್ದಾರೆ. ನಟಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಟ ವಸಿಷ್ಠ ಎನ್ ಸಿಂಹ ಕೂಡ ಕಾಣಿಸಿಕೊಳ್ಳಲಿದ್ದಾರೆ. 2021ರ ಸೀಟಿಮಾರ್ ಚಲನಚಿತ್ರವನ್ನು ಕೊನೆಯ ಬಾರಿಗೆ ನಿರ್ದೇಶಿಸಿದ್ದ ಬರಹಗಾರ- ನಿರ್ದೇಶಕ ಸಂಪತ್ ನಂದಿ ಅವರು ಈಗ ತಮ್ಮ ಮುಂದಿನ ಚಿತ್ರ 'ಒಡೆಲಾ 2'ದೊಂದಿಗೆ ಬರಹಗಾರರಾಗಿ ಬರುತ್ತಿದ್ದಾರೆ. ಮುಂಬರುವ ಸೂಪರ್ ನ್ಯಾಚುರಲ್ ಥ್ರಿಲ್ಲರ್‌ಗೆ ಅಶೋಕ್ ತೇಜ ನಿರ್ದೇಶಕರಾಗಿದ್ದಾರೆ. ನಟಿ ತಮನ್ನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.ಒಡೆಲಾ 2 ಚಿತ್ರಕ್ಕೆ ವಾರಣಾಸಿಯಲ್ಲಿ ಮುಹೂರ್ತ ಸಮಾರಂಭದೊಂದಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಚಿತ್ರೀಕರಣವನ್ನು ಸಹ ಪ್ರಾರಂಭಿಸಲಾಗಿದೆ. ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ಸಂಪತ್, ತಮನ್ನಾ ಜೊತೆಗಿನ ಮೊದಲ ದಿನದ ಚಿತ್ರೀಕರಣದ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದಾರೆ. 'ಒಡೆಲಾ 2' 2022ರ ಚಲನಚಿತ್ರ 'ಒಡೆಲಾ ರೈಲ್ವೆ ಸ್ಟೇಷನ್'ನ ಅಧಿಕೃತ ಸೀಕ್ವೆಲ್ ಆಗಿದೆ. ಈ ಚಿತ್ರದಲ್ಲಿ ಸಂಪತ್ ಬರಹಗಾರರಾಗಿ ಕೆಲಸ ಮಾಡಿದ್ದಾರೆ.ಒಡೆಲಾ ರೈಲ್ವೆ ಸ್ಟೇಷನ್ ಚಿತ್ರದಲ್ಲಿ ಹೆಬಾ ಪಟೇಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರೆ, ಸೀಕ್ವೆಲ್‌ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಡೆಲಾ 2 ಚಿತ್ರವನ್ನು ಡಿ ಮಧು ನಿರ್ಮಿಸಿದ್ದಾರೆ.ಚಿತ್ರದಲ್ಲಿ ನಟ ವಸಿಷ್ಠ ಎನ್ ಸಿಂಹ, ಯುವ, ನಾಗ ಮಹೇಶ್, ವಂಶಿ, ಗಗನ್ ವಿಹಾರಿ, ಸುರೇಂದರ್ ರೆಡ್ಡಿ, ಭೂಪಾಲ್ ಮತ್ತು ಪೂಜಾ ರೆಡ್ಡಿ ಸಹ ನಟಿಸಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಸೌಂದರ್ ರಾಜನ್ ಎಸ್ ಛಾಯಾಗ್ರಹಣವಿದೆ.