ಸೆಪ್ಟೆಂಬರ್ 15ಕ್ಕೆ ರಾಘವೇಂದ್ರ ರಾಜ್ಕುಮಾರ್ ನಟನೆಯ '13' ಚಿತ್ರ ಬಿಡುಗಡೆ ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಟ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ನಟಿ ಶ್ರುತಿ ಒಟ್ಟಿಗೆ ನಟಿಸಿರುವ '13' ಸಿನಿಮಾವು ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಗಲಿದೆ. ಶೀರ್ಷಿಕೆಯಿಂದಲೇ ಪ್ರೇಕ್ಷಕರ ಗಮನ ಸೆಳೆದಿರುವ ನಟ ರಾಘವೇಂದ್ರ ರಾಜ್‌ಕುಮಾರ್‌ ಮತ್ತು ನಟಿ ಶ್ರುತಿ ಒಟ್ಟಿಗೆ ನಟಿಸಿರುವ '13' ಸಿನಿಮಾವು ಸೆಪ್ಟೆಂಬರ್ 15ಕ್ಕೆ ಬಿಡುಗಡೆಯಾಗಲಿದೆ.ಈ ಹಿಂದೆ 'ಪಲ್ಲಕ್ಕಿ', 'ಅಮೃತವಾಹಿನಿ'ಯಂಥ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ ನರೇಂದ್ರಬಾಬು ಅವರು '13' ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಅಂತರಧರ್ಮೀಯ ಪ್ರೇಮ ಕಥೆ ಇದ್ದು, ಗಂಡ- ಹೆಂಡತಿ ಅಂದರೆ ಹೀಗಿರಬೇಕು ಎನ್ನುವಂತಿದ್ದ ದಂಪತಿಗಳಿಬ್ಬರೂ ತಮ್ಮದಲ್ಲದ ತಪ್ಪಿಗೆ ಇಡೀ ಜೀವನ ಯಾವ ರೀತಿ ಕಷ್ಟ ಅನುಭವಿಸುತ್ತಾರೆ ಎಂಬುವ ಕಥೆ ಸಿನಿಮಾದಲ್ಲಿದೆಯಂತೆಮನುಷ್ಯ ಸಂಬಂಧಗಳನ್ನು ಬೆಸೆಯುವ ಸಂದೇಶ ಕೂಡ ಈ ಚಿತ್ರದಲ್ಲಿದೆಯಂತೆ. ಸೆನ್ಸಾರ್‌ನಲ್ಲಿ ಈಗಾಗಲೇ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.ಇದನ್ನೂ ಓದಿ: ಶ್ರೇಯಸ್ ನಟನೆಯ 'ಒಂದ್ಸಲ ಮೀಟ್ ಮಾಡೋಣ' ಚಿತ್ರಕ್ಕೆ ಎಸ್.ನಾರಾಯಣ್ ಆ್ಯಕ್ಷನ್ ಕಟ್ಈ ಸಿನಿಮಾ ನರೇಂದ್ರ ಬಾಬು ಅವರ 8ನೇ ಚಿತ್ರವಾಗಿದ್ದು, ಚಿತ್ರದಲ್ಲಿ ಮೂರು ಕಮರ್ಷಿಯಲ್ ಹಾಡುಗಳಿವೆ. ಯು ವಿ ಪ್ರೊಡಕ್ಷನ್ ಅಡಿಯಲ್ಲಿ ಕೆ ಸಂಪತ್‌ ಕುಮಾರ್‌, ಎಚ್‌ ಎಸ್ ಮಂಜುನಾಥ್‌, ಮಂಜುನಾಥ ಗೌಡ ಹಾಗೂ ಸಿ ಕೇಶವಮೂರ್ತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಚಿತ್ರಕ್ಕೆ ಶೋಗನ್ ಬಾಬು ಅವರು ಸಂಗೀತ ನೀಡಿದ್ದಾರೆ.ಪಾರ್ಟ್ 1 ಹಾಗೂ ಪಾರ್ಟ್ 2ರಂತೆ ಚಿತ್ರದಂತ ಸಿನಿಮಾ ಮಾಡಿದ್ದು, ಪಾರ್ಟ್ 1 ಚಿತ್ರವು ಸೆಪ್ಟೆಂಬರ್ 15ರಂದು ಬಿಡುಗಡೆಯಾಗುತ್ತಿದೆ.