ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ದರ್ಶನ್ ಅಭಿನಯದ 'ಕಾಟೇರ': 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಕ್ಕೆ ದರ್ಶನ್ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ರಿಲೀಸ್ ಆದ ಮೊದಲ ವಾರದಲ್ಲೇ 100 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾದ ಸಿನಿಮಾ 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವುದಕ್ಕೆ ದರ್ಶನ್ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ತರುಣ್ ಸುಧೀರ್ ನಿರ್ದೇಶಿಸಿರುವ ‘ಕಾಟೇರ’ ಇದೀಗ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ದಿನದಿಂದಲೂ ಕಾಟೇರ ಬಾಕ್ಸ್ ಆಫೀಸ್‌ನಲ್ಲಿ ಮುನ್ನುಗ್ಗುತ್ತಲೇ ಸಾಗಿದ್ದು, ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. - ## ## # @@ @ ../RTZliXb5Hjಡಿಸೆಂಬರ್ 29ರಂದು ಚಿತ್ರ ರಾಜ್ಯದಾದ್ಯಂತ ತೆರೆಕಂಡಿದ್ದು, ಚಿತ್ರ ಬಿಡುಗಡೆಯಾದ ಮೊದಲನೇ ದಿನ ಕಾಟೇರ 19.79 ಕೋಟಿ ರೂ. ಗಳಿಸಿತ್ತು. ಎರಡನೇ ದಿನ 17.35 ಕೋಟಿ ರೂ. ಗಳಿಸಿತ್ತು. ಮೂರನೇ ದಿನಕ್ಕೆ ಬರೋಬ್ಬರಿ 20.94 ಕೋಟಿ ರೂ. ಸಂಗ್ರಹಿಸಿದೆ. ನಾಲ್ಕನೇ ದಿನ 18.26 ಕೋಟಿ ರೂ. ಗಳಿಸಿತ್ತು. ಆರನೇ ದಿನಕ್ಕೆ 9.78 ಕೋಟಿ ರೂ. ಗಳಿಸುವ ಮೂಲಕ ಚಿತ್ರವು ಒಟ್ಟು 95.36 ಕೋಟಿ ರೂ. ಸಂಗ್ರಹಿಸಿತ್ತು. @' # #100Crore 7th- 9.25 . 72 406 52.77 , … ../4q5VlLBEegಇದೀಗ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲೇ ಬರೋಬ್ಬರಿ 104.58 ಕೋಟಿ ರೂ. ಗಳಿಸುವ ಮೂಲಕ ಕಾಟೇರ ಚಿತ್ರ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಇದನ್ನೂ ಓದಿ: 2024ರಲ್ಲಿ ತೆರೆ ಕಾಣಲು ಸಾಲು ಸಾಲು ಸಿನಿಮಾ ಸಿದ್ಧ; ಸ್ಟಾರ್ ನಟರ ಯಾವೆಲ್ಲಾ ಚಿತ್ರಗಳಿವೆ ನೋಡಿ...ಚಿತ್ರದಲ್ಲಿ ಆರಾಧನಾ ರಾಮ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಹಿರಿಯ ನಟರಾದ ಬಿರಾದಾರ್, ಜಗಪತಿ ಬಾಬು, ಕುಮಾರ್ ಗೋವಿಂದ್, ಮಾಸ್ಟರ್ ರೋಹಿತ್ ಮತ್ತು ಡ್ಯಾನಿಶ್ ಅಖ್ತರ್ ಸೈಫಿ ನಟಿಸಿದ್ದಾರೆ. ಚಿತ್ರಕ್ಕೆ ಮಾಸ್ತಿ ಸಂಭಾಷಣೆ ಬರೆದಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.