'ರವಿಕೆ ಪ್ರಸಂಗ' ಹೇಳೋಕೆ ಬರ್ತಿದ್ದಾರೆ 'ಬ್ರಹ್ಮಗಂಟು' ಖ್ಯಾತಿಯ ಗೀತಾ ಭಾರತಿ ಭಟ್! ನಿರ್ದೇಶಕ ಸಂತೋಷ್ ಕೊಂಡಂಕೇರಿ ತಮ್ಮ ಮುಂದಿನ ಚಿತ್ರಕ್ಕೆ 'ಟೈಟಲ್ ಅಂತಿಮಗೊಳಿಸಿದ್ದಾರೆ. ರವಿಕೆ ಪ್ರಸಂಗ ಎಂಬ ಶೀರ್ಷಿಕೆ ಇರುವ ಚಿತ್ರದ ಪೋಸ್ಟರ್ ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು . ನಿರ್ದೇಶಕ ಸಂತೋಷ್ ಕೊಂಡಂಕೇರಿ ತಮ್ಮ ಮುಂದಿನ ಚಿತ್ರಕ್ಕೆ 'ಟೈಟಲ್ ಅಂತಿಮಗೊಳಿಸಿದ್ದಾರೆ. ರವಿಕೆ ಪ್ರಸಂಗ ಎಂಬ ಶೀರ್ಷಿಕೆ ಇರುವ ಚಿತ್ರದ ಪೋಸ್ಟರ್ ಇತ್ತೀಚೆಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಬಿಡುಗಡೆ ಮಾಡಿದರು .ಹೆಣ್ಣುಮಕ್ಕಳು ಮನೆಯಲ್ಲಿ ಯಾವುದೇ ಸಮಾರಂಭವಾದರೂ ಸೀರೆಗೆ ತಕ್ಕಂತೆ ರವಿಕೆ ಹೊಲಿಸಿಕೊಳ್ಳುವುದು ರೂಡಿ. ಅಂತಹ ರವಿಕೆಯ ಕುರಿತಾದ ‘ರವಿಕೆ ಪ್ರಸಂಗ’ ಎಂಬ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಪ್ರಚಾರದ ಮೊದಲ ಹೆಜ್ಜೆಯಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ.ದಕ್ಷಿಣ ಕನ್ನಡದ ಹಿನ್ನೆಲೆಯ ಈ ಚಿತ್ರವು ನ್ಯಾಯಾಲಯದಲ್ಲಿ ನಡೆಯುವ ಕಥೆಯಾಗಿದೆ. ನಾಯಕಿ ಸಾನ್ವಿ, ವರನನ್ನು ಹುಡುಕುತ್ತಿದ್ದು, ಮದುವೆಗೆ ಎನ್‌ಆರ್‌ಐ ಪ್ರಸ್ತಾಪ ಬರುತ್ತದೆ.. ಹೀಗಾಗಿ ಡೀಸೈನ್ ಬ್ಲೈಸ್ ಹೊಲಿಸಲು ಟೈಲರ್‌ ಬಳ ಹೋದಾಗ ಅನೇಕ ಟ್ವಿಸ್ಟ್‌ಗಳು ಬರುತ್ತವೆ ಹೀಗಾಗಿ ಇಬ್ಬರೂ ಕೋರ್ಟ್ ಮೆಟ್ಟಿಲೇರುತ್ತಾರೆ.. ಮುಂದಿನದು ಘಟನೆಗಳ ಹಾಸ್ಯಮಯ ರೋಲರ್ ಕೋಸ್ಟರ್ ಆಗಿದೆ ಎಂದು ನಿರ್ದೇಶಕರು ಹೇಳುತ್ತಾರೆ.ರವಿಕೆ ಪ್ರಸಂಗ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆಯನ್ನು ಸಂತೋಷ್ ಅವರ ಪತ್ನಿ ಪಾವನಾ ಬರೆದಿದ್ದಾರೆ . ಖ್ಯಾತ ಧಾರಾವಾಹಿ ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಗೀತಾ ಭಾರತಿ ಭಟ್ ಅವರ ಸೋಲೋ ಲೀಡ್ ಚೊಚ್ಚಲ ಚಿತ್ರವಾಗಲಿದೆ. ಚಿತ್ರದಲ್ಲಿ ಸುಮನ್ ರಂಗನಾಥ್ ನ್ಯಾಯಾಧೀಶರಾಗಿ ಮತ್ತು ರಾಕೇಶ್ ಮೈಯ್ಯ ವಕೀಲರಾಗಿ ಕಾಣಿಸಿಕೊಂಡಿದ್ದಾರೆ. ಇದೇ ಜೂನ್ ನಲ್ಲಿ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.ಇದನ್ನೂ ಓದಿ: ಯಶ್ 19ನೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಷನ್!ಈ ಚಿತ್ರದ ಕಥೆ ಬಹಳ ಇಷ್ಟವಾಯಿತು. ಪ್ರತಿಯೊಬ್ಬ ಹೆಣ್ಣುಮಕ್ಕಳಿಗೆ ರವಿಕೆ ಮೇಲೆ ಪ್ರೀತಿ. ಅದರ ಅಳತೆ ಸರಿಯಾಗಿರಬೇಕು ಎಂದು ಸಾಕಷ್ಟು ಸಲ ಟೈಲರ್ ಜೊತೆ ಚರ್ಚಿಸುತ್ತಾರೆ. ಈ ರೀತಿ ಮಹಿಳೆ ಹಾಗೂ ಟೈಲರ್ ನಡುವೆ ರವಿಕೆಗಾಗಿ ನಡೆಯುವ ಮುಖ್ಯ ವಿಷಯವೇ “ರವಿಕೆ ಪ್ರಸಂಗ”. ಸಂಭಾಷಣೆ ಮಂಗಳೂರು ಕನ್ನಡದಲ್ಲಿರುತ್ತದೆ. ಎಲ್ಲರ ಮನಸ್ಸಿಗೆ, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಈ ಚಿತ್ರ ಪ್ರಿಯವಾಗಲಿದೆ.ಸಂಪತ್ ಮೈತ್ರಿಯಾ ಟೈಲರ್ ಪಾತ್ರದಲ್ಲಿ ನಟಿಸುತ್ತಿದ್ದು, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕಾಟಾರ್, ಪ್ರವೀಣ್ ಅಥರ್ವ, ರಘು ಪಾದೇಶ್ವರ್, ಕುಶಿ ಆಚಾರ್ ಮತ್ತು ರಾಹು ಪಾದೇಶ್ವರ್ ಮುಂತಾದವರು ತಾರಾಗಣದ ಭಾಗವಾಗಲಿದ್ದಾರೆ. ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಅಡಿಯಲ್ಲಿ ತಯಾರಾದ ರವಿಕೆ ಪ್ರಸಂಗ ಚಿತ್ರಕ್ಕೆ ವಿನಯ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ ಮತ್ತು ಮುರಳೀಧರ್ ಎನ್ ಅವರ ಛಾಯಾಗ್ರಹಣವಿದೆ.