ಪ್ಯಾನ್-ಇಂಡಿಯಾ ಸಿನಿಮಾ ಮಾಡಲು ಗೋಲ್ಡನ್ ಸ್ಟಾರ್ ಗಣೇಶ್ ಮುಂದು! ನಿರ್ದೇಶಕ ಶ್ರೀನಿವಾಸ್ ರಾಜು ಅವರ ರೊಮ್ಯಾಂಟಿಕ್ ಕಾಮಿಡಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬ್ಯುಸಿಯಾಗಿದ್ದು, ಇದರ ನಡುವಲ್ಲೇ ಪ್ಯಾನ್-ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಿರ್ದೇಶಕ ಶ್ರೀನಿವಾಸ್ ರಾಜು ಅವರ ರೊಮ್ಯಾಂಟಿಕ್ ಕಾಮಿಡಿ ಕೃಷ್ಣಂ ಪ್ರಣಯ ಸಖಿ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಬ್ಯುಸಿಯಾಗಿದ್ದು, ಇದರ ನಡುವಲ್ಲೇ ಪ್ಯಾನ್-ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕನ್ನಡದ ಖ್ಯಾತ ನಿರ್ಮಾಪಕ ವಿಖ್ಯಾತ್ ಅವರು, ಈ ಸಿನಿಮಾಗೆ ಬಂಡವಾಳ ಹೂಡಲಿದ್ದು, ‘ವಿಖ್ಯಾತ್ ಚಿತ್ರ’ ಬ್ಯಾನರ್ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬರಲಿದೆ.ಇದು ಗೋಲ್ಡನ್ ಗಣಿಯ 42 ನೇ ಸಿನಿಮಾವಾಗಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್ ಮಾಡುವ ಸಲುವಾಗಿ ಚಿತ್ರದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಗಣೇಶ್ ಶೋ ಮ್ಯಾನ್ ರೀತಿ ಕಾಣಿಸಿಕೊಂಡಿದ್ದಾರೆ. ಆದರೆ, ಚಿತ್ರದ ಟೈಟಲ್ ಇನ್ನೂ ಬಹಿರಂಗಗೊಂಡಿಲ್ಲ.ಇದನ್ನೂ ಓದಿ: ಗಣೇಶ್-ಶ್ರೀನಿವಾಸ್ ರಾಜು ಮುಂಬರುವ ಚಿತ್ರದ ಮೂಲಕ ಮಾಳವಿಕಾ ನಾಯರ್ ಕನ್ನಡಕ್ಕೆ ಪದಾರ್ಪಣೆ!ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆಯಾಗುವುದರಿಂದ ಬಹುಭಾಷೆಯ ಸಮಗ್ರ ತಾರಾಗಣವನ್ನು ಚಿತ್ರದಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಲು ಚಿತ್ರತಂಡ ಸಿದ್ಧತೆಗಳನ್ನು ನಡೆಸುತ್ತಿದೆ. ಈಗಾಗಲೇ ನಿರ್ದೇಶಕರು ಸಿದ್ಧತೆಗಳನ್ನು ಆರಂಭಿಸಿದ್ದು, ಶೀಘ್ರದಲ್ಲೇ ತಾರಾಗಣ ಮತ್ತು ತಾಂತ್ರಿಕ ಸಿಬ್ಬಂದಿಗಳ ಕುರಿತು ಮಾಹಿತಿಗಳು ಅನಾವರಣಗೊಳ್ಳಲಿದೆ.