ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಸ್ಮಾರ್ಟ್ ಫೋನ್ ಗಳಿವು... ಗ್ಯಾಡ್ಜೆಟ್ ಪ್ರಿಯರಿಗೆ ಏಪ್ರಿಲ್ ತಿಂಗಳು ಅತ್ಯಂತ ಆಕರ್ಷಣೀಯವಾಗಿದೆ. ಒನ್ ಪ್ಲಸ್ ನಾರ್ಡ್ ಸಿಇ4, ರಿಯಲ್ ಮೀ 12x 5G, ಮೋಟರೋಲಾ ಎಡ್ಜ್ 50 ಪ್ರೋ ಸೇರಿದಂತೆ ಈ ತಿಂಗಳಲ್ಲಿ ಹಲವು ಸ್ಮಾರ್ಟ್ ಫೋನ್ ಗಳು ಬಿಡುಗಡೆಯಾಗುತ್ತಿವೆ. ಈ ಎಲ್ಲಾ ಹೊಸ ಶ್ರೇಣಿಯ ಮೊಬೈಲ್ ಫೋನ್ ಗಳು ಸ್ಲೀಕ್ ವಿನ್ಯಾಸ, ಹೆಚ್ಚಿನ ಕಾರ್ಯಕ್ಷಮತೆಯ ಬ್ಯಾಟರಿ ಮತ್ತು ಹಲವಾರು ಇತರ ಅತ್ಯಾಧುನಿಕ ವಿಶೇಷಣಗಳನ್ನು ಹೊಂದಿವೆ.ಈ ತಿಂಗಳಲ್ಲಿ ಬಿಡುಗಡೆಯಾಗುತ್ತಿರುವ ಮೊಬೈಲ್ ಫೋನ್ ಗಳ ವಿವರ ಹೀಗಿದೆ.ಒನ್ ಪ್ಲಸ್ ನೋರ್ಡ್ ಸಿಇ4: ಏ.1 ರಂದು ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದೆ. 4 ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ ಅದು 7 3 ಪ್ರೊಸೆಸರ್, 100W ಚಾರ್ಜಿಂಗ್ ನ್ನು ಹೊಂದಿದೆ. ಡಾರ್ಕ್ ಕ್ರೋಮ್ ಮತ್ತು ಮಾರ್ಬಲ್ ಬಣ್ಣಗಳಲ್ಲಿ ಆಯ್ಕೆಗಳು ಲಭ್ಯವಿದೆ. 8GB ಮತ್ತು 256GB ಸ್ಟೋರೇಜ್ ಮತ್ತು ಹೆಚ್ಚಿನ ವೈಶಿಷ್ಟ್ಯಗಳು ಲಭ್ಯವಿದೆ. ಮೂಲ ಮಾದರಿಯ ಆರಂಭಿಕ ಬೆಲೆ 24,999 ರೂಗಳಾಗಿವೆ. 12X 5G: ಈ ಹ್ಯಾಂಡ್‌ಸೆಟ್ ನ್ನು 2 ಏಪ್ರಿಲ್ 2024 ರಂದು ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಈ ಹ್ಯಾಂಡ್‌ಸೆಟ್‌ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ 6.72-ಇಂಚಿನ + ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್, 14 ಆಪರೇಟಿಂಗ್ ಸಿಸ್ಟಮ್, 5,000mAh ಬ್ಯಾಟರಿಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 13,499 ರೂಪಾಯಿಗಳಾಗಿವೆ. C65: ಈ ಹ್ಯಾಂಡ್‌ಸೆಟ್ ನ್ನು ವಿಯೆಟ್ನಾಂನಲ್ಲಿ ಏಪ್ರಿಲ್ 2 ರಂದು ಬಿಡುಗಡೆ ಮಾಡಲಾಗಿದೆ. ಫಿಲಿಪೈನ್ಸ್, ಮಲೇಷ್ಯಾ, ಬಾಂಗ್ಲಾದೇಶ ಮತ್ತು ಇಂಡೋನೇಷ್ಯಾದಂತಹ ಇತರ ದೇಶಗಳಲ್ಲಿ ಶೀಘ್ರದಲ್ಲೇ ಅನಾವರಣಗೊಳ್ಳುವ ನಿರೀಕ್ಷೆಯಿದೆ. ಭಾರತದಲ್ಲಿ C65 ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಈ ಹ್ಯಾಂಡ್‌ಸೆಟ್‌ನ ಕೆಲವು ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ 6.67-ಇಂಚಿನ ಪ್ಯಾನೆಲ್, G85 ಪ್ರೊಸೆಸರ್, 45W ಫಾಸ್ಟ್ ಚಾರ್ಜಿಂಗ್ ಜೊತೆಗೆ 5000 ಬ್ಯಾಟರಿಯನ್ನು ಈ ಮೊಬೈಲ್ ಒಳಗೊಂಡಿದೆ. 40 ಸರಣಿ: ಈ ಸ್ಮಾರ್ಟ್‌ಫೋನ್ ಏಪ್ರಿಲ್ 2024 ರಲ್ಲಿ ಭಾರತದಲ್ಲಿ ಬಿಡುಗಡೆಯಾಗುವುದು ಖಚಿತವಾಗಿದೆ. ನಿಖರವಾದ ಬಿಡುಗಡೆ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ. ಈ ಹ್ಯಾಂಡ್‌ಸೆಟ್‌ನ ಆರಂಭಿಕ ಬೆಲೆ ರೂ 24,000 ಎಂದು ನಿರೀಕ್ಷಿಸಲಾಗಿದೆ. ಈ ಮೊಬೈಲ್ ನ ಕೆಲವು ನಿರೀಕ್ಷಿತ ವೈಶಿಷ್ಟ್ಯಗಳು ಮತ್ತು ವಿಶೇಷಣಗಳೆಂದರೆ 6.78-ಇಂಚಿನ + ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7020 , 4,600mAh ಬ್ಯಾಟರಿಯನ್ನು ಈ ಮೊಬೈಲ್ ಹೊಂದಿದೆ.