ಜಗತ್ತಿನಾದ್ಯಂತ ಆಂಡ್ರಾಯ್ಡ್ ಬಳಕೆದರರ ಟ್ವಿಟರ್ ಆಪ್ ಕ್ರ್ಯಾಶ್! ಜಾಗತಿಕ ಮಟ್ಟದಲ್ಲಿ ಆಂಡ್ರಾಯ್ಡ್ ಬಳಕೆದಾರರ ಟ್ವಿಟರ್ ಆಪ್ ಕ್ರ್ಯಾಶ್ ಆಗಿದೆ. ಜಾಗತಿಕ ಮಟ್ಟದಲ್ಲಿ ಆಂಡ್ರಾಯ್ಡ್ ಬಳಕೆದಾರರ ಟ್ವಿಟರ್ ಆಪ್ ಕ್ರ್ಯಾಶ್ ಆಗಿದೆ. ಸಮಸ್ಯೆಯನ್ನು ಸ್ವತಃ ಟ್ವಿಟರ್ ಒಪ್ಪಿಕೊಂಡಿದ್ದು, ತಕ್ಷಣದಿಂದಲೇ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದೆ. ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಟ್ವೀಟರ್ ಆಪ್ ಸಮಸ್ಯೆಗೆ ಕಾರಣವನ್ನು ಪತ್ತೆ ಮಾಡುತ್ತಿದ್ದೇವೆ. ಒಮ್ಮೆ ಸಮಸ್ಯೆ ಬಗೆಹರಿಯುವವರೆಗೂ ಆಪ್ ಅಪ್ ಡೇಟ್ ಮಾಡಬೇಡಿ ಎಂದು ಟ್ವೀಟರ್ ಹೇಳಿದೆ. ಟ್ವಿಟರ್ ಹೊಸದಾಗಿ 8.28 ಆವೃತ್ತಿಯ ಅಪ್ ಡೇಟ್ ನೀಡಿದ್ದು, ಆಗಿನಿಂದಲೂ ಕ್ರ್ಯಾಶ್ ಸಮಸ್ಯೆ ಎದುರಾಗಿದೆ.