ಅಂಗಡಿ ಮುಚ್ಚಿದ ನೋಕಿಯಾ ನಷ್ಟದ ಸುಳಿಯಲ್ಲಿರುವ ನೋಕಿಯಾ ಕಂಪನಿ ಚೀನಾದ ಶಾಂಘೈನಲ್ಲಿರುವ ನೋಕಿಯಾ ಫ್ಲ್ಯಾಗ್‌ಶಿಪ್ ಅಂಗಡಿಯನ್ನು ಮುಚ್ಚಿದೆ. ಹಣಕಾಸು ಅಡಚಣೆ ಎದುರಿಸುತ್ತಿರುವ ನೋಕಿಯಾ ಸಂಸ್ಥೆ ಅದೇ ಕಾರಣಕ್ಕೆ ಕಂಪನಿಯ ಅಂಗಡಿಗಳನ್ನು ಮುಚ್ಚಿದೆ. ಸದ್ಯಕ್ಕೆ ಡೀಲರ್ ಮತ್ತು ರಿಟೋಲ್ ಅಂಗಡಿಗಳ ಮೂಲಕವೇ ನೋಕಿಯಾ ಮೊಬೈಲ್‌ಗಳನ್ನು ಮಾರಾಟ ಮಾಡಲಿದೆ. ಕಂಪನಿಯ ಅಂಗಡಿಗಳನ್ನೆಲ್ಲ ಮುಚ್ಚಲಿದೆ ಎಂದು ಹೇಳಿದೆ. ಹಣಕಾಸು ಅಡಚಣೆ ನಿವಾರಿಸಲು ತನ್ನ ಮುಖ್ಯ ಕಚೇರಿ ಇರುವ ಕಟ್ಟಡವನ್ನೇ ಲೀಸ್‌ಗೆ ನೀಡಿರುವ ಕಂಪನಿ, ಅಧಿಕೃತ ಅಗಂಡಿ ಮುಚ್ಚಿದ್ದು ದೊಡ್ಡ ಸಂಗತಿಯೇನಲ್ಲ ಬಿಡಿ.