ಜಿಯೋನಿ ಪಯೋನೀರ್ ಪಿ2ಎಸ್ ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಹೆಸರು ಮಾಡಿರುವ ಜಿಯೋನಿ ಸ್ಮಾರ್ಟ್‌ಫೋನ್ ತನ್ನ ಬಹುನಿರೀಕ್ಷಿತ ... ಮೊಬೈಲ್ ಉತ್ಪಾದನೆ ಮತ್ತು ವಿನ್ಯಾಸದಲ್ಲಿ ಹೆಸರು ಮಾಡಿರುವ ಜಿಯೋನಿ ಸ್ಮಾರ್ಟ್‌ಫೋನ್ ತನ್ನ ಬಹುನಿರೀಕ್ಷಿತ ಜಿಯೋನಿ ಪಯೋನೀರ್ ಪಿ2ಎಸ್ ಸ್ಮಾರ್ಟ್ ಫೋನ್ ಅನ್ನು ಭಾರತಕ್ಕೆ ಪರಿಚಯಿಸಿದೆ. ಬಣ್ಣ , ಆಕರ್ಷಕ ವಿನ್ಯಾಸ ಹಾಗೂ 1.3 ಡ್ಯೂಯಲ್ ಕೋರ್ ಪ್ರೋಸಸರ್ ಜಿಯೋನಿ ಪಿ2ಎಸ್‌ನ ಜೀವಾಳವಾಗಿದೆ. 4 ಇಂಚಿನ ಪರದೆ ಹೊಂದಿರುವ ಪಿ2ಎಸ್, ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಒಎಸ್ ತಂತ್ರಜ್ಞಾನದಲ್ಲಿ ಕಾರ್ಯನಿರ್ವಹಿಸಲಿದೆ. ಅಧಿಕ ಸಮಯದ ಬ್ಯಾಟರಿ ಬಾಳಿಕೆ, 5 ಮೆಗಾ ಪಿಕ್ಸ್‌ಲ್ ಕ್ಯಾಮೆರಾ, 4 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಕೆಂಪು, ನೀಲಿ ಹಾಗೂ ಹಳದಿ ಬಣ್ಣದಲ್ಲಿ ಲಭ್ಯವಿದ್ದು ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 7 ಸಾವಿರಕ್ಕೆ ಲಭ್ಯವಿದೆ.