ಮಂಗಳ ಅನ್ವೇಷಣೆಗೆ ಸಭೆ ಭಾರತೀಯ ಇಸ್ರೋ ಮತ್ತು ಅಮೆರಿಕದ ನಾಸಾ ಸಂಸ್ಥೆಗಳು ಜತೆಗೂಡಿ ಮಂಗಳ ಗ್ರಹದ ಅನ್ವೇಷಣೆ ಬಗ್ಗೆ ಚರ್ಚೆ... ನವದೆಹಲಿ: ಭಾರತೀಯ ಇಸ್ರೋ ಮತ್ತು ಅಮೆರಿಕದ ನಾಸಾ ಸಂಸ್ಥೆಗಳು ಜತೆಗೂಡಿ ಮಂಗಳ ಗ್ರಹದ ಅನ್ವೇಷಣೆ ಬಗ್ಗೆ ಚರ್ಚೆ ನಡೆಸಲಿವೆ. ಬೆಂಗಳೂರಿನಲ್ಲಿ ಜ.29ರಿಂದ 31ರ ವರೆಗೆ ನಡೆಯಲಿರುವ ಸಮಾರಂಭದಲ್ಲಿ ಈ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಇಸ್ರೋ ಮತ್ತು ನಾಸಾ ವಿಜ್ಞಾನಿಗಳು ನಡೆಸಿದ ಅಧ್ಯಯನದ ಆಧಾರದ ಮೇಲೆ ಮಂಗಳ ಗ್ರಹದ ಅನ್ವೇಷಣೆ ಯಾವ ರೀತಿ ಮಾಡಬಹುದು ಎಂದು 3 ದಿನಗಳ ಸಭೆಯಲ್ಲಿ ಚರ್ಚಿಸಲಾಗುತ್ತದೆ.