ಸ್ಮಾರ್ಟ್ ಸೋಲ್ಸ್ ಶೂಸ್ ಅಲ್ಜೀಮರ್ಸ್ ನಿಂದಾಗಿ ಮನೆ ಹಿರಿಯರು ಸದಾ ಕಾಲ ಮನೆಯ ದಾರಿ ತಪ್ಪುತ್ತಿದ್ದರೆ ಇನ್ನು ಮುಂದೆ ಚಿಂತಿಸಬೇಕಿಲ್ಲ. ಜಿಪಿಎಸ್ ಸ್ಮಾರ್ಟ್... ಅಲ್ಜೀಮರ್ಸ್ ನಿಂದಾಗಿ ಮನೆ ಹಿರಿಯರು ಸದಾ ಕಾಲ ಮನೆಯ ದಾರಿ ತಪ್ಪುತ್ತಿದ್ದರೆ ಇನ್ನು ಮುಂದೆ ಚಿಂತಿಸಬೇಕಿಲ್ಲ. ಜಿಪಿಎಸ್ ಸ್ಮಾರ್ಟ್ ಸೋಲ್ ಶೂಸ್ ಗಳು ನಿಮ್ಮ ನೆರವಿಗೆ ಬರಲಿವೆ. ಮರೆವು, ಆಟಿಸಂ, ಇನ್ನಾವುದೇ ಕಾಗ್ನಿಟಿವ್ ಡಿಸಾರ್ಡ್ ರ್ಸ್ ಇರಲಿ, ಈ ಶೂ ಹಾಕಿ ವಾಕಿಂಗ್ ಗೆ ಕಳುಹಿಸಿದರೆ ಅವರು ಎಲ್ಲೆಲ್ಲಿ ಓಡಾಡುತ್ತಿದ್ದಾರೆ, ಬೌಂಡರಿ ದಾಟಿ ಹೋದರೋ ಎಂಬ ಎಲ್ಲ ಮಾಹಿತಿಗಳನ್ನು ಬ್ಲೂಟೂತ್ ಚಿಪ್ ಗಳು ಕಲೆ ಹಾಕುತ್ತವೆ. ನಂತರ ಮಾಹಿತಿಯನ್ನು ವೈಫೈ ಸಹಾಯದಿಂದ ನಿಮ್ಮ ಸ್ಮಾರ್ಟ್ ಫೋನ್ ಗೆ ರವಾನಿಸುತ್ತದೆ. ಇದರ ಬ್ಯಾಟರಿ ಒಂದು ವರ್ಷಗಳ ಕಾಲ ಬಹುವುದರಿಂದ ಆಗಾಗ ಬ್ಯಾಟರಿ ಚೇಂಜ್ ಮಾಡುವ ರಿಚಾರ್ಜ್ ಮಾಡುವ ಅಗತ್ಯವಿಲ್ಲ. ಇಷ್ಟೆಲ್ಲಕ್ಕಾಗಿ ನೀವು ಮಾಡಬೇಕಾದ್ದಿಷ್ಟೆ, ನಿಮ್ಮ ಮೊಬೈಲ್ ನಲ್ಲಿ ಫ್ರೀ ಸ್ಮಾರ್ಟ್ ಲೊಕೇಟರ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬೇಕು.