ಸ್ಯಾಮ್‌ನ ಸ್ಮಾರ್ಟ್ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ದೈತ್ಯ ಸ್ಯಾಮ್‌ಸಂಗ್ ಕಂಪನಿಯು ಮತ್ತೆ ಕ್ಯಾಮೆರಾ ಕ್ಷೇತ್ರದತ್ತ ದಾಪುಗಾಲು ಹಾಕುತ್ತಿದೆ. ಜಿಸಿ100 ಸ್ಮಾರ್ಟ್ ಕ್ಯಾಮೆರಾದ ಮೂಲಕ ಹೊಸ ಶಖೆ ಆರಂಭಿಸಿದ್ದ ಸ್ಯಾಮ್‌ಸಂಗ್ ಇದೇ ಸ್ಮಾರ್ಟ್ ಕ್ಯಾಮೆರಾ ಆವೃತ್ತಿಯನ್ನು ಮುಂದುವರೆಸುತ್ತಿದೆ. ಲಾಸ್ ವೆಗಾಸ್‌ನಲ್ಲಿ ನಡೆಯುತ್ತಿರುವ ಕನ್ಸ್ಯೂಮರ್ ಎಲೆಕ್ಟ್ರಾನಿಕ್ ಶೋನಲ್ಲಿ ಸ್ಯಾಮ್‌ಸಂಗ್‌ನ ಮತ್ತೆ ಐದು ಸ್ಮಾರ್ಟ್ ಕ್ಯಾಮೆರಾಗಳು ಪ್ರದರ್ಶನಗೊಂಡಿವೆ. ಏಪ್ರಿಲ್ ವೇಳೆಗೆ ಈ ಐದೂ ಕ್ಯಾಮೆರಾಗಳು ಮಾರುಕಟ್ಟೆಗೆ ಬರುತ್ತಿವೆ. ಡಬ್ಲ್ಯೂಬಿ350ಎಫ್, ಡಬ್ಲ್ಯೂಬಿ35ಎಫ್, ಡಬ್ಲ್ಯೂಬಿ50ಎಫ್, ಡಬ್ಲ್ಯೂಬಿ1100ಎಫ್ ಮತ್ತು ಡಬ್ಲ್ಯೂಬಿ2200ಎಪ್ ಎಂಬ ಆವೃತ್ತಿಗಳನ್ನು ಈ ಮೇಳದಲ್ಲಿ ಪ್ರದರ್ಶಿಸಲಾಗಿದೆ. ಸ್ಯಾಮ್‌ಸಂಗ್‌ನ ಅತ್ಯುತ್ತಮ ಕ್ಯಾಮೆರಾಗಳಿವು ಎಂದು ಹೇಳಲಾಗುತ್ತಿದೆ. ಜಿಸಿ100ನಲ್ಲಿದ್ದಂತೆ ಎನ್‌ಎಫ್‌ಸಿ ಮತ್ತು ವೈ-ಫೈ ಸಂಪರ್ಕವನ್ನು ಇದಕ್ಕೂ ನೀಡಲಾಗಿದೆ. ಡಬ್ಲ್ಯೂಬಿ2200ಎಪ್ ಕ್ಯಾಮೆರಾ 60ಎಕ್ಸ್ ಆಪ್ಟಿಕಲ್ ಝೂಮ್ ಹಾಗೂ 16 ಮೆಗಾ ಪಿಕ್ಸೆಲ್ ಹೊಂದಿದೆ. 1080 ಪಿ ರೆಸಲ್ಯೂಷನ್ ಹೊಂದಿರುವುದರಿಂದ ಚಿತ್ರೀಕರಣಕ್ಕೂ ಬಳಸಬಹುದು. ಅದೇ ಡಬ್ಲ್ಯೂಬಿ1100ಎಪ್ ಕ್ಯಾಮೆರಾಕ್ಕೆ 35ಎಕ್ಸ್ ಆಪ್ಟಿಕಲ್ ಝೂಮ್, 16.2 ಮೆಗಾ ಪಿಕ್ಸೆಲ್ ಹೊಂದಿದೆ. ಡಬ್ಲ್ಯೂಬಿ50ಎಫ್ ಕೂಡ 16 ಮೆಗಾ ಪಿಕ್ಸೆಲ್ ಹೊಂದಿದ್ದು, 12 ಆಪ್ಟಿಕಲ್ ಝೂಮ್ ಹೊಂದಿದೆ. ಉಳಿದ ಎರಡೂ ಕ್ಯಾಮೆರಾಗಳು ಇದೇ ಫೀಚರ್ಸ್‌ಗಳನ್ನು ಹೊಂದಿವೆ. ಆದರೆ ಬೇರೆ ಬೇರೆ ಬಣ್ಣದಲ್ಲಿ ಲಭ್ಯವಿರುವುದರಿಂದ ಹೆಸರು ಬೇರೆ ನೀಡಲಾಗಿದೆ. ಕೆಂಪು, ಬಿಳಿ, ಕಪ್ಪು ಹಾಗೂ ನೇರಳೆ ಬಣ್ಣದಲ್ಲಿ ಕ್ಯಾಮೆರಾಗಳು ಲಭ್ಯವಿರಲಿವೆ.