ಸೈತಾನ ಇರುವೆ ಪತ್ತೆ ಹೊಸದೊಂದು ಸೈತಾನ ಇರುವೆ ಪತ್ತೆಯಾಗಿದೆ. ಕೇಂದ್ರ ಅಮೆರಿಕ ಮತ್ತು ಕೆರೆಬಿಯನ್ ದ್ವೀಪದಲ್ಲಿ ಈ ಇರುವೆ ಪತ್ತೆಯಾಗಿದ್ದು, ನೋಡಲು ಭಯ ಹುಟ್ಟಿಸುವಂತಿದೆ. ಭಯಾನಕ ರೂಪ ಹೊಂದಿರುವ ಇದು, ಹರಿತವಾದ ಹಲ್ಲುಗಳನ್ನು ಹೊಂದಿದೆ. ಇಂಥ ಹಲ್ಲುಗಳು ಇದೇ ಪ್ರಭೇದಕ್ಕೆ ಸೇರಿರುವ ಇತರೆ ಇರುವೆಗಳಲ್ಲಿ ಇಲ್ಲ. ಕಳೆದ 29 ರಂದು ಇದು ಪತ್ತೆಯಾಗಿದ್ದು, ನೋಡಿದರೆ ಭಯವಾಗುತ್ತದೆ ಎಂದು ಉಟಾಹ್ ವಿವಿಯ ಎಂಟೋಮೋಲಾಜಿಸ್ಟ್ ಜಾಕ್ ಲಾಂಗಿನೋ ಹೇಳಿದ್ದಾರೆ. ಈ ಇರುವೆಗೆ ಮಾಯಾ ನಾಗರಿಕತೆಯ ಕುರುಹಾಗಿ ಮಾಯಾ ಎಂದೇ ಹೆಸರಿಸಲಾಗಿದೆ. ಆದರೆ ವಿಷಾದದ ಸಂಗತಿ ಎಂದರೆ ದಿನದಿಂದ ದಿನಕ್ಕೆ ಈ ಭಾಗದಲ್ಲಿ ಇರುವೆಗಳ ಸಂತತಿ ಕಡಿಮೆಯಾಗುತ್ತಿದೆ ಎಂದು ಲಾಂಗಿನೋ ಅವರೇ ಹೇಳಿದ್ದಾರೆ.