ಸ್ವಾತಂತ್ರ್ಯೋತ್ಸವಕ್ಕೆ ಗಾಂಧಿ ದಂಡಿ ಸತ್ಯಾಗ್ರಹದ ಡೂಡಲ್ ಬಿಡಿಸಿದ ಗೂಗಲ್ ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಸಂಸ್ಥೆ, ಮಹಾತ್ಮ ಗಾಂಧಿ ಅವರ ದಂಡಿ ಉಪ್ಪಿನ ಸತ್ಯಾಗ್ರಹದ ಡೂಡಲ್ ಚಿತ್ರವನ್ನು ತನ್ನ ಮುಖಪುಟದ ಮೇಲೆ ಬಿಡಿಸುವ ಮೂಲಕ ನವದೆಹಲಿ: ಅಂತರ್ಜಾಲ ಸರ್ಚ್ ದೈತ್ಯ ಗೂಗಲ್ ಸಂಸ್ಥೆ, ಮಹಾತ್ಮ ಗಾಂಧಿ ಅವರ ದಂಡಿ ಉಪ್ಪಿನ ಸತ್ಯಾಗ್ರಹದ ಡೂಡಲ್ ಚಿತ್ರವನ್ನು ತನ್ನ ಮುಖಪುಟದ ಮೇಲೆ ಬಿಡಿಸುವ ಮೂಲಕ ಇಂದು ೬೯ ನೆ ಭಾರತ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಈ ಅನಿಮೇಟೆಡ್ ಡೂಡಲ್ ನಲ್ಲಿ ಮಹಾತ್ಮಾ ಗಾಂಧಿ ಸತ್ಯಾಗ್ರಹದ ಮುಂದಾಳತ್ವ ವಹಿಸಿದ್ದು ಇತರ ಸ್ವತಂತ್ರ ಯೋಧರು ಅವರನ್ನು ಹಿಂಬಾಲಿಸಿದ್ದಾರೆ. ದಂಡಿ ಉಪ್ಪಿನ ಸತ್ಯಾಗ್ರಹ ಭಾರತದ ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿತ್ತು. ಕಳೆದ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಗೂಗಲ್ ತನ್ನ ಮುಖಪುಟದಲ್ಲಿ ಭಾರತದ ಮೊದಲ ಅಂಚೆ ಚೀಟಿಯನ್ನು ಪ್ರದರ್ಶಿಸಿತ್ತು.