ವಿಂಡೋಸ್8ರಿಂದ 10ಕ್ಕೆ ಜಿಗಿದ ಮೈಕ್ರೋಸಾಫ್ಟ್ ಮೈಕ್ರೋಸಾಫ್ಟ್ ವಿಂಡೋಸ್ ಅಚ್ಚರಿಯ ನೆಗೆತ ಹಾಕಿದೆ. ವಿಂಡೋಸ್-8 ಆಪರೇಟಿಂಗ್ ಸಿಸ್ಟಂ (ಒಎಸ್)ನ ಮುಂದಿನ ಆವೃತ್ತಿಯಾಗಿ ವಿಂಡೋಸ್ 10ನ್ನು ಬಿಡುಗಡೆ ಮಾಡಿದೆ. ನವದೆಹಲಿ: ಮೈಕ್ರೋಸಾಫ್ಟ್ ವಿಂಡೋಸ್ ಅಚ್ಚರಿಯ ನೆಗೆತ ಹಾಕಿದೆ. ವಿಂಡೋಸ್-8 ಆಪರೇಟಿಂಗ್ ಸಿಸ್ಟಂ (ಒಎಸ್)ನ ಮುಂದಿನ ಆವೃತ್ತಿಯಾಗಿ ವಿಂಡೋಸ್ 10ನ್ನು ಬಿಡುಗಡೆ ಮಾಡಿದೆ. ಬಹುತೇಕರು ಮೈಕ್ರೋಸಾಫ್ಟ್ ಕಂಪನೆ ತನ್ನ ಆಪರೇಟಿಂಗ್ ಸಿಸ್ಟಂನ ಮುಂದಿನ ಆವೃತ್ತಿಯಾಗಿ ವಿಂಡೋಸ್-9 ಅನ್ನು ಬಿಡುಗಡೆ ಮಾಡಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಮೈಕ್ರೋಸಾಫ್ಟ್‌ನ ಈ ನೆಗೆತ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ವಿಂಡೋಸ್‌ನ 10ನೇ ಆವೃತ್ತಿಯಲ್ಲಿ ಸ್ಮಾರ್ಟ್ ಮೆನು ಸೌಲಭ್ಯವನ್ನು ಸೇರಿಸಲಾಗಿದೆ. ವಿಂಡೋಸ್ 8ರಲ್ಲಿದ್ದ ಗಾತ್ರ ಹೆಚ್ಚಿಸಬಹುದಾದ ಟೈಲ್ಸ್‌ಗಳನ್ನು ಉಳಿಸಿಕೊಳ್ಳಲಾಗಿದೆ. ಈ ಮೂಲಕ ನೋಟಿಫಿಕೇಶನ್‌ಗಳು ಮುಖ್ಯವಾಗಿ ಇ-ಮೇಲ್‌ಗಳ, ಫೇಸ್‌ಬುಕ್ ಮೆಸೇಜ್‌ಗಳು, ಹವಾಮಾನ ಮುನ್ಸೂಚನೆ ಕುರಿತ ಸೂಚನೆಗಳ ಮೇಲೆ ತ್ವರಿತವಾಗಿ ಕಣ್ಣಾಡಿಸುವುದು ಸಾಧ್ಯವಿದೆ. 2 ಸ್ಕ್ರೀನ್‌ನ ಯೋಟಾ ಫೋನ್ ಬಿಡುಗಡೆ: ರಷ್ಯಾದ ಜನಪ್ರಿಯ ಎರಡು ಡಿಸ್‌ಪ್ಲೇ ಸ್ಕ್ರೀನ್‌ನ ಸ್ಮಾರ್ಟ್‌ಫೋನ್ 'ಯೋಟಾಫೋನ್‌' ಸದ್ಯದಲ್ಲೇ ಭಾರತದಲ್ಲೂ ಬಿಡುಗಡೆಯಾಗಲಿದೆ. ಫ್ಲಿಪ್‌ಕಾರ್ಟ್ ಈ ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.